More

    ಕಿವೀಸ್‌ಗೆ ಆಘಾತ ನೀಡಿದ ಬಾಂಗ್ಲಾದೇಶ: 4 ದಿನಗಳ ಅಂತರದಲ್ಲಿ ನ್ಯೂಜಿಲೆಂಡ್ ಎದುರು 2ನೇ ಗೆಲುವು

    ನೇಪಿಯರ್: ಸರ್ವಾಂಗೀಣ ನಿರ್ವಹಣೆ ತೋರಿದ ಪ್ರವಾಸಿ ಬಾಂಗ್ಲಾದೇಶ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ಗೆ 5 ವಿಕೆಟ್‌ಗಳ ಆಘಾತ ನೀಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಮೆಕ್ಲಿನ್ ಪಾರ್ಕ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್, ಕೇವಲ 1 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಜೇಮ್ಸ್ ನೀಶಾಮ್ (48) ಹೋರಾಟದಿಂದ ಅಂತಿಮವಾಗಿ 9 ವಿಕೆಟ್‌ಗೆ 134 ರನ್‌ಗಳ ಗುರಿ ನೀಡಿತು. ಪ್ರತಿಯಾಗಿ ಲಿಟನ್ ದಾಸ್ (42*) ಸಮಯೋಚಿತ ಬ್ಯಾಟಿಂಗ್ ಬಲದಿಂದ ಬಾಂಗ್ಲಾ 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 137 ರನ್‌ಗಳಿಸಿ 4 ದಿನಗಳ ಅಂತರದಲ್ಲಿ ಕಿವೀಸ್ ಎದುರು 2ನೇ ಗೆಲುವು ದಾಖಲಿಸಿತು. 2ನೇ ಪಂದ್ಯ ಶುಕ್ರವಾರ ಮೌಂಟ್ ಮೌಗನುಯಿನಲ್ಲಿ ನಡೆಯಲಿದೆ.

    ಕಿವೀಸ್: 9 ವಿಕೆಟ್‌ಗೆ 134 ( ಡೆರಿಲ್ 14, ಚಾಪ್‌ಮನ್ 19, ನೀಶಾಮ್ 48, ಸ್ಯಾಂಟ್ನರ್ 23, ಶೋರಿುಲ್ 26ಕ್ಕೆ3, ಮಹಿದಿ ಹಸನ್ 14ಕ್ಕೆ 2). ಬಾಂಗ್ಲಾ: 18.4 ಓವರ್‌ಗಳಲ್ಲಿ 5 ವಿಕೆಟ್‌ಗೆ 137 (ಲಿಟನ್ 42*, ನಜ್ಮೂಲ್ 19, ಸೌಮ್ಯ 22, ಮಹಿದಿ 19*,ಸ್ಯಾಂಟ್ನರ್ 16 ಕ್ಕೆ 1). ಪಂದ್ಯಶ್ರೇಷ್ಠ: ಮಹಿದಿ ಹಸನ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts