More

    ಸಾಹಿತ್ಯ ಲೋಕಕ್ಕೆ ಕನ್ನಡಿಗರ ಕೊಡುಗೆ ಅಪಾರ

    ಯರಗಟ್ಟಿ: ಚುಟುಕುಗಳು ಕೂಡ ಗಂಭೀರ ಸಾಹಿತ್ಯವಾಗಿದ್ದು, ಎಲ್ಲವನ್ನೂ ಸರಿಸಮಾನವಾಗಿ ಕಾಣಬೇಕು ಎಂದು ಬೆಳಗಾವಿ ಆರ್‌ಪಿಡಿ ಕಾಲೇಜು ಪ್ರಾಧ್ಯಾಪಕ, ಸಾಹಿತಿ ಎಚ್.ಬಿ. ಕೋಲಕಾರ ಹೇಳಿದರು.

    ಇಲ್ಲಿನ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಲೋಕದಲ್ಲಿ ಕನ್ನಡಿಗರ ಕೊಡುಗೆ ಅಪಾರ ಎಂದರು.

    ರಾಘವೇಂದ್ರ ದೇಶಪಾಂಡೆ ಮಾತನಾಡಿ, ಚುಟುಕು ಸಾಹಿತ್ಯಕ್ಕೆ ಹಾಸ್ಯವೇ ಜೀವಾಳವಾಗಿದ್ದು, ಅತಿ ಕಡಿಮೆ ಸಾಲುಗಳಲ್ಲಿ ವಿಶಾಲವಾದ ಅರ್ಥ ಹುದುಗಿರುತ್ತದೆ ಎಂದರು.

    ಚುಟುಕು ಸಾಹಿತ್ಯ ಪರಿಷತ್‌ತಾಲೂಕು ಘಟಕದ ಅಧ್ಯಕ್ಷ ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ಟಿ.ಎಂ. ಕಾಮನ್ನವರ, ರಮೇಶಗೌಡ ದೇವರಡ್ಡಿ, ಡಾ. ರಾಜಶೇಖರ ಬಿರಾದಾರ, ಡಾ. ಮಲ್ಲಿಕಾರ್ಜುನ ಇಂಚಲ, ಭಾಸ್ಕರ ಹಿರೇಮೆತ್ರಿ, ಎಸ್.ಎಸ್. ಕುರಬಗಟ್ಟಿಮಠ, ಪಿ.ಎಚ್.ಪಾಟೀಲ, ಆರ್.ಎಲ್. ಜೂಗನವರ, ರಾಜೇಂದ್ರ ಶೆಟ್ಟಿ, ವಿಠ್ಠಲ ದಳವಾಯಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts