More

    ಅಧ್ಯಯನ, ಅನುಭವದಿಂದ ಸಾಹಿತ್ಯ ರಚನೆ; ಸಾಹಿತಿ ಡಾ.ಗವಿಸಿದ್ದಪ್ಪ ಹಂದ್ರಾಳ

    ಅಳವಂಡಿ: ವಿದ್ಯಾರ್ಥಿಗಳು ಸಾಹಿತಿಗಳ ಎಲ್ಲ ಪ್ರಕಾರದ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಸತತ ಅಧ್ಯಯನ ಮತ್ತು ಆಳವಾದ ಅನುಭವದಿಂದ ಸಾಹಿತ್ಯ ರಚಿಸಲು ಸಾಧ್ಯ ಎಂದು ಅಜೀಂ ಪ್ರೇಮ್‌ಜೀ ಫೌಂಡೇಶನ್ ತಾಲೂಕು ಸಂಯೋಜಕ, ಸಾಹಿತಿ ಡಾ.ಗವಿಸಿದ್ದಪ್ಪ ಹಂದ್ರಾಳ ಅಭಿಪ್ರಾಯಪಟ್ಟರು.

    ಸಮೀಪದ ಹಿರೇಸಿಂದೋಗಿ ಸರ್ಕಾರಿ ಪದವಿಪೂರ್ವ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿಗಳು ಸಾಹಿತ್ಯ ರಚಿಸುವುದು ಹೇಗೆ?’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಬೇಕು. ಸಾಹಿತಿಯಾದವರಿಗೆ ಅಧ್ಯಯನ, ಅಧ್ಯಾಪನ, ಅನುಭವ ಅಗತ್ಯ. ಸೂಕ್ಷ್ಮ ಮನಸ್ಸು, ತೀಕ್ಷ್ಣನೋಟ, ಸಾಮಾಜಿಕ ಕಳಕಳಿ ಇದ್ದಾಗ ಮಾತ್ರ ಉತ್ತಮ ಗ್ರಂಥಗಳನ್ನು ರಚಿಸಲು ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯದತ್ತ ಒಲವು ತೋರಬೇಕು ಹಾಗೂ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು.

    ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಸಾಹಿತ್ಯ ಓದುವ ಗೀಳನ್ನು ಹಚ್ಚಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಉತ್ತಮ ಕೃತಿಗಳ ರಚನೆಗೆ ಸಹಕಾರಿಯಾಗುತ್ತದೆ. ಹೀಗಾಗಿ ಓದುವ ಹವ್ಯಾಸ ರೂಢಿಸಿಕೊಂಡರೆ ಮಾತ್ರ ಜೀವನದಲ್ಲಿ ದೊಡ್ಡ ದೊಡ್ಡ ಸಾಹಿತಿಗಳಾಗಿ ಬೆಳೆಯಬಹುದು ಎಂದು ಹೇಳಿದರು.

    ಹಂಪಿ ಕನ್ನಡ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮೆಹಬೂಬ್ ಸಾಬ್ ಮಾತನಾಡಿದರು. ಉಪನ್ಯಾಸಕರಾದ ವೀರಶೇಖರ ಪತ್ತಾರ, ಐ.ಎನ್.ಪಾಟೀಲ, ಕೆ.ಜಿ.ಲತಾ, ಆಂಜನೇಯ ಗುಜ್ಜಲ್, ಅನಿತಾ ದಲಬಂಜನ್, ಜಯಪಾಲರಡ್ಡಿ ಚಲ್ಲಾ, ಸಂಗೀತ ಬೀಳಗಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts