More

    ಸಾಹಿತ್ಯಕ್ಕಿದೆ ಬದುಕು ರೂಪಿಸುವ ಶಕ್ತಿ

    ಕಡೂರು: ಯುವಪೀಳಿಗೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಹಿತ್ಯಕ್ಕೆ ಬದುಕನ್ನು ಉತ್ತಮವಾಗಿ ರೂಪಿಸುವ ಶಕ್ತಿ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮತ್ತು ಹೋಬಳಿ ಘಟಕಗಳಿಂದ ಗಿರಿಯಾಪುರದಲ್ಲಿ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಹಾಗೂ ಹಿರೇನಲ್ಲೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಸೇವಾದೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ದಾರಿ ತಪ್ಪುತ್ತಿರುವ ಯುವಜನರನ್ನು ಸರಿದಾರಿಗೆ ತರಲು ಉತ್ತಮ ಪುಸ್ತಕಗಳು ಸಹಕಾರಿ. ಸಾಹಿತ್ಯ ನಮ್ಮ ಬದುಕಿನ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಗುರುಹಿರಿಯರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎಂದರು.
    ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಕಸಾಪದಿಂದ ತಾಲೂಕು ಹಾಗೂ ಕಸಬಾ ಹೋಬಳಿ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
    ಹಿರೇನಲ್ಲೂರು ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಜಿ.ಆರ್. ಶಿವಲಿಂಗಸ್ವಾಮಿ ಸೇವಾ ದೀಕ್ಷೆ ಸ್ವೀಕರಿಸಿದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಎಸ್.ಪರಮೇಶ್ವರಪ್ಪ, ಕೋಶಾಧ್ಯಕ್ಷ ಬಿ.ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಜಯಣ್ಣ, ಜಿ.ಪಿ.ಪ್ರಭುಕುಮಾರ್, ಜ್ಞಾನದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಪಿ.ಕುಮಾರಪ್ಪ, ಕಾರ್ಯದರ್ಶಿ ಜಿ.ಎಸ್.ಸತೀಶ್, ಶಶಿಧರ, ವಸುಧಾ ಷಡಕ್ಷರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts