More

    ಸಾಕ್ಷರತೆ ಹೆಚ್ಚಳಕ್ಕೆ ಯೋಜನೆಗಳು ಜಾರಿ

    ಗಂಗಾವತಿ: ತಾಲೂಕಿನ ಢಣಾಪುರದ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಒಕ್ಕೂಟದ ಸಭೆ ಮತ್ತು ಪ್ರಧಾನ ಮಂತ್ರಿ ಡಿಜಿಟಲ್ ಸಾಕ್ಷರತಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಡಿಜಿಟಲ್ ಸಾಕ್ಷರತೆಯತ್ತ ಚೀಲೂರು ಗ್ರಾಮದ ಹೆಜ್ಜೆ

    ಜಿಲ್ಲಾ ನೋಡಲ್ ಅಧಿಕಾರಿ ಪರಶುರಾಂ ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದ್ದು, ಸಿಎಸ್‌ಸಿ ಸೇವಾ ಕೇಂದ್ರದ ಮೂಲಕ ಪಿಎಂ ದಿಶಾ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

    ಆಯುಷ್ಮಾನ್, ಇ-ಶ್ರಮ ಕಾರ್ಡ, ಕಿಸಾನ, ಶ್ರಮಯೋಗಿ ಯೋಜನೆಗಳು ಪಡೆದುಕೊಳ್ಳಲು ಅವಕಾಶವಿದ್ದು, ಉಚಿತ ನೋಂದಣಿ ಮಾಡಲಾಗುತ್ತಿದೆ ಎಂದರು.
    ಸಂಸ್ಥೆ ಸದಸ್ಯರು,ಯವ ಸಮೂಹ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

    ಗ್ರಾಪಂ ಅಧ್ಯಕ್ಷ ಗಣೇಶ, ಸದಸ್ಯರಾದ ವೀರನಗೌಡ, ಹನುಮೇಶ್ ಢಣಾಪುರ, ತಾಪಂ ಮಾಜಿ ಸದಸ್ಯ ಬಿ.ಕೀರಪ್ಪ, ಒಕ್ಕೂಟದ ಅಧ್ಯಕ್ಷೆ ನಾಗರತ್ನಮ್ಮ, ಪದಾಧಿಕಾರಿಗಳಾದ ಶರಣಮ್ಮ, ಲಕ್ಷ್ಮೀ ಹೆಬ್ಬಾಳ್, ಅನಿತಾ ರಾಥೋಡ್, ಮೇಲ್ವಿಚಾರಕ ನೂರ್‌ಮಹ್ಮದ್, ತಾಲೂಕು ನೋಡಲ್ ಅಧಿಕಾರಿ ರಂಗಪ್ಪ, ಮುಖಂಡರಾದ ಮಲ್ಲನಗೌಡ, ಅಯ್ಯಪ್ಪ , ಚಿದಾನಂದಪ್ಪ , ಸೇವಾ ಪ್ರತಿನಿಧಿಗಳಾದ ವಿಶಾಲಕ್ಷಮ್ಮ, ಲಲಿತಾ, ಬಸವನಗೌಡ, ಶರಣಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts