More

    ಕ್ರಿಕೆಟ್ ಕಾಮೆಂಟರಿಗೆ ಮಹಿಳೆಯರು ಬೇಡ ಎಂದ ಬಾಯ್ಕಟ್‌ಗೆ ಲೀಸಾ ಸೆಡ್ಡು

    ಲಂಡನ್/ಮೆಲ್ಬೋರ್ನ್: ವಿಶಿಷ್ಟ ಧ್ವನಿ ಮತ್ತು ಶೈಲಿಯಿಂದಾಗಿ ಕ್ರಿಕೆಟ್ ಕಾಮೆಂಟರಿಯಲ್ಲಿ ಜನಪ್ರಿಯತೆ ಸಂಪಾದಿಸಿದ್ದ ಇಂಗ್ಲೆಂಡ್‌ನ ಜೆಫ್ರಿ ಬಾಯ್ಕಟ್ ಕರೊನಾ ಭೀತಿಯಿಂದಾಗಿ ಇತ್ತೀಚೆಗೆ ಬಿಬಿಸಿ ವೀಕ್ಷಕವಿವರಣೆಕಾರರ ತಂಡದಿಂದ ನಡೆದಿದ್ದರು. ಇದೇ ವೇಳೆ ಅವರು ನೀಡಿದ ಹೇಳಿಕೆಯೊಂದು ವಿವಾದಕ್ಕೆ ಗ್ರಾಸವಾಗಿದೆ. ಪುರುಷರ ಕ್ರಿಕೆಟ್‌ನ ಶಕ್ತಿ ಮಹಿಳಾ ಕ್ರಿಕೆಟ್‌ಗೆ ಸಮನಲ್ಲ. ಹೀಗಾಗಿ ಉನ್ನತ ಮಟ್ಟದಲ್ಲಿ ಪುರುಷರ ಕ್ರಿಕೆಟ್ ಆಡಿದವರು ಮಾತ್ರ ಟೆಸ್ಟ್ ಪಂದ್ಯಗಳ ವೇಳೆ ವೀಕ್ಷಕವಿವರಣೆ ನೀಡಲು ಅವಕಾಶ ಕಲ್ಪಿಸಬೇಕೆಂದು 79 ವರ್ಷದ ಬಾಯ್ಕಟ್ ಹೇಳಿದ್ದರು. ಇದಕ್ಕೆ, ಆಸ್ಟ್ರೇಲಿಯಾದ ಮಾಜಿ ಮಹಿಳಾ ಕ್ರಿಕೆಟರ್ ಮತ್ತು ಹಾಲಿ ವೀಕ್ಷಕವಿವರಣೆಕಾರರಾದ ಲೀಸಾ ಸ್ಥಳೇಕರ್ ದಿಟ್ಟ ತಿರುಗೇಟು ನೀಡಿದ್ದಾರೆ.

    ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ಸಾಕ್ಷಿ, ಮೀರಾ ಆಸೆ ಪಡಲು ಇದೇ ಕಾರಣವಿರಬಹುದೇ?

    ‘ಪುರುಷರು ಅಥವಾ ಮಹಿಳೆಯರಿರಲಿ, ಇಬ್ಬರೂ ಕ್ರಿಕೆಟ್ ಆಡುವ ರೀತಿ ಒಂದೇ ಆಗಿದೆ. ಕ್ರಿಕೆಟ್‌ನಲ್ಲಿ ಶಕ್ತಿಯದ್ದು ಯಾವ ಪಾತ್ರವೂ ಇಲ್ಲ. ಬಾಯ್ಕಟ್ ಹೇಳಿಕೆಯನ್ನಿಟ್ಟುಕೊಂಡು ಹೇಳುವುದಾದರೆ, ಮಹಿಳಾ ಕ್ರಿಕೆಟ್‌ಗೆ ಪುರುಷರು ಹೇಗೆ ವೀಕ್ಷಕವಿವರಣೆ ನೀಡುತ್ತಾರೆ. ಅವರೆಂದೂ ಮಹಿಳೆಯರ ವಿರುದ್ಧ ಕ್ರಿಕೆಟ್ ಆಡಿದ ಅನುಭವ ಹೊಂದಿರುವುದಿಲ್ಲ. ಆದರೆ ಕ್ರಿಕೆಟ್ ಆಟವನ್ನು ಆ ರೀತಿಯಾಗಿ ನೋಡಬಾರದು’ ಎಂದು 40 ವರ್ಷದ ಸ್ಥಳೇಕರ್, ಬಾಯ್ಕಟ್‌ಗೆ ಸೆಡ್ಡು ಹೊಡೆದಿದ್ದಾರೆ.

    ಬಾಯ್ಕಟ್‌ಗಿಂತ ಮಹಿಳೆಯರು ಉತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದಾರೆ

    ಕ್ರಿಕೆಟ್ ಕಾಮೆಂಟರಿಗೆ ಮಹಿಳೆಯರು ಬೇಡ ಎಂದ ಬಾಯ್ಕಟ್‌ಗೆ ಲೀಸಾ ಸೆಡ್ಡು
    ‘ಬಾಯ್ಕಟ್ ಯಾವ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಆಟದ ದಿನಗಳಲ್ಲಿ ಅದನ್ನು ಅವರು ತೋರಿಸಿರಲಿಲ್ಲ. ಅವರ ಸ್ಟ್ರೈಕ್ ರೇಟ್ ಗಮನಿಸಿ ನೋಡಿ. ಅವರದೇ ತಲೆಮಾರಿನ ಕೆಲ ಮಹಿಳಾ ಕ್ರಿಕೆಟಿಗರು ಅದಕ್ಕಿಂತ ಉತ್ತಮ ಸ್ಟ್ರೈಕ್‌ರೇಟ್ ಹೊಂದಿದ್ದರು’ ಎಂದು ಆಸೀಸ್ ಪರ 8 ಟೆಸ್ಟ್, 125 ಏದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿ ಕ್ರಮವಾಗಿ 416, 2728 ಮತ್ತು 769 ರನ್ ಗಳಿಸಿರುವ ಭಾರತ ಮೂಲದ ಸ್ಥಳೇಕರ್ ಹೇಳಿದ್ದಾರೆ.

    ಇದನ್ನೂ ಓದಿ: ಕ್ರಿಕೆಟಿಗ ವಿಜಯ್ ಭಾರದ್ವಾಜ್ 2ನೇ ಹೆಂಡತಿ ಯಾರು ಗೊತ್ತೇ..?

    ‘ಟೆಸ್ಟ್ ಕ್ರಿಕೆಟ್‌ಗೆ ಕಾಮೆಂಟರಿ ನೀಡುವಾಗ ಅದರ ಒತ್ತಡ, ಉತ್ಸಾಹ ಮತ್ತು ತಾಂತ್ರಿಕತೆಗಳ ಬಗ್ಗೆ ತಿಳಿದುಕೊಂಡಿರುವುದು ಅಗತ್ಯ. ಪುಸ್ತಕಗಳನ್ನು ಓದುವುದರಿಂದ ಅದರ ಬಗ್ಗೆ ತಿಳಿದುಕೊಳ್ಳಲಾಗದು. ಕ್ಲಬ್ ಕ್ರಿಕೆಟ್, 2ನೇ ದರ್ಜೆ ಕ್ರಿಕೆಟ್ ಅಥವಾ ಮಹಿಳಾ ಕ್ರಿಕೆಟ್ ಆಡುವುದರಿಂದಲೂ ಅದರ ಬಗ್ಗೆ ತಿಳಿದುಕೊಳ್ಳಲಾಗದು. ಮಹಿಳೆಯರು ಅವರ ಕ್ರಿಕೆಟ್‌ನಲ್ಲಿ ಉತ್ತಮವಿರಬಹುದು. ಆದರೆ ಪುರುಷರ ಕ್ರಿಕೆಟ್‌ನ ಶಕ್ತಿ ಮತ್ತು ವೇಗಕ್ಕೆ ಅದು ಸಾಟಿಯಾಗದು’ ಎಂದು ಬಾಯ್ಕಟ್ ಇತ್ತೀಚೆಗೆ ‘ಲಂಡನ್ ಟೆಲಿಗ್ರಾಫ್​’ ಅಂಕಣದಲ್ಲಿ ಬರೆದುಕೊಂಡಿದ್ದರು. 1964ರಿಂದ 1982ರ ನಡುವೆ ಬಾಯ್ಕಟ್ ಇಂಗ್ಲೆಂಡ್ ಪರ 108 ಟೆಸ್ಟ್ ಆಡಿ 8,114 ರನ್ ಗಳಿಸಿದ್ದರು.

    ಧೋನಿ ನಿನ್ನ ಕ್ರಿಕೆಟ್ ಜೀವನವನ್ನೇ ಕೊನೆಗೊಳಿಸುತ್ತಾರೆ ಎಂದು ಶ್ರೀಶಾಂತ್ ಹೆದರಿಸಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts