More

    ‘ಎಣ್ಣೆ’ ಕೊಂಡು ಬಿಲ್​ ತೋರಿಸ್ದವರಿಗೆ ಬೆನ್ನತ್ತಿದ್ಯಾರು ಗೊತ್ತಾ?

    ಬೆಂಗಳೂರು: ಮದ್ಯ ಮಾರಾಟದ ಮೇಲಿದ್ದ ನಿರ್ಬಂಧ ತೆರವಾಗುತ್ತಿದ್ದಂತೆ, ಸೋಮವಾರ ರಾಜ್ಯದ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ನಿನ್ನೆ ಒಂದೇ ದಿನ 45 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಅಬಕಾರಿ ಇಲಾಖೆ ಲೆಕ್ಕ ಹಾಕಿದೆ.
    ಇದ್ಯಾವ ಲೆಕ್ಕ ಅಂತಾ.. ಉತ್ತರಪ್ರದೇಶದ ಅಧಿಕಾರಿಗಳು ನೀಡಿರುವ ಅಂಕಿ-ಅಂಶ ಕೇಳಿದರೆ ಇನ್ನೂ ಹೌಹಾರುತ್ತೀರಿ. ಏಕೆಂದರೆ ಅಲ್ಲಿ ನಿನ್ನೆ ಒಂದೇ ದಿನ 100 ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯ ಮಾರಾಟವಾಗಿದೆ.

    ಮದ್ಯ ಖರೀದಿಗೆ ಕಿ.ಮೀ.ಗಟ್ಟಲೇ ಸಾಲು ನಿಂತಿದ್ದು, ಲಾಠಿಚಾರ್ಜ್​ ಆಗಿದ್ದು ಭಾರಿ ಸುದ್ದಿಯಾಗಿದ್ದವು. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮದ್ಯ ಖರೀದಿಯ ಎರಡು ಬಿಲ್​ಗಳು ಭಾರಿ ಚರ್ಚೆಗೆ ಕಾರಣವಾಗಿದ್ದವು. 40 ದಿನದ ಬಾಕಿಯನ್ನೆಲ್ಲ ಒಂದೇ ದಿನ ಖರೀದಿಸಿದ್ದಾರೆ. ಮುಂದಿನ ಲಾಕ್​ಡೌನ್​ ಈಗಲೇ ಸ್ಟಾಕ್​ ಮಾಡಿಕೊಂಡಿದ್ದಾರೆ. ಬೆಂಗಳೂರನ್ನು ಮಂಗಳೂರು ಮೀರಿಸಿದೆ ಎಂದೆಲ್ಲ ಟ್ರೋಲ್​ ಮಾಡಲಾಗುತ್ತಿತ್ತು.

    ಇದನ್ನೂ ಓದಿ;  ಮನೆಯಲ್ಲೇ ಮದುವೆಯಾಗುವ ಜೋಡಿಗೆ ಇಲ್ಲಿದೆ ಪೊಲೀಸರ ಭರ್ಜರಿ ಆಫರ್​

    ಈ ಟ್ರೋಲ್​ಗಳು ಅಬಕಾರಿ ಇಲಾಖೆಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಮದ್ಯದಂಗಡಿ ಮಾಲೀಕನ ವಿರುದ್ಧ ಕೇಸ್​ ದಾಖಲಿಸಲು ಮುಂದಾಗಿದ್ದಾರೆ.

    ಏಕೆ ಅಂತೀರಾ?… ಒಬ್ಬ ವ್ಯಕ್ತಿಗೆ 2.6 ಲೀಟರ್​ ದೇಶಿ ತಯಾರಿತ ವಿದೇಶಿ ಮದ್ಯ ಹಾಗೂ 18 ಲೀಟರ್​ ಬಿಯರ್​ ಮಾರಾಟ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಬೆಂಗಳೂರಿನ ತಾವರೆಕೆರೆಯಮದ್ಯದಂಗಡಿಯಲ್ಲಿ ಒಬ್ಬ ಗ್ರಾಹಕನಿಗೆ 52,841 ರೂ. ಮೌಲ್ಯದ 13.5 ಲೀಟರ್​ ಮದ್ಯ ಹಾಗೂ 35 ಲೀಟರ್​ ಬಿಯರ್​ ಮಾರಾಟ ಮಾಡಲಾಗಿದೆ.

    ಈ ಬಿಲ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಅಬಕಾರಿಗಳು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಅಂಗಡಿಯವರು ಹೇಳುವ ಪ್ರಕಾರ 8 ಜನರ ಗುಂಪು ಮದ್ಯ ಖರೀದಿಸಿದ್ದು, ಒಂದೇ ಕಾರ್ಡ್​ನಿಂದ ಸ್ವೈಪ್​ ಮಾಡಿದ್ದಾರೆ ಎಂಬ ಕಾರಣ ನೀಡಿದ್ದಾರೆ.

    ಇನ್ನು, ಮಂಗಳೂರಿನ ಬಲ್ಮಠದಲ್ಲಿರುವ ಅಂಗಡಿಯಲ್ಲೂ 59,952 ರೂ. ಮೊತ್ತದ ಒಂದೇ ಬಿಲ್​ನಲ್ಲಿ 16.64 ಲೀಟರ್​ ಮದ್ಯ ಮಾರಾಟ ಮಾಡಲಾಗಿದೆ. ಈ ಪ್ರಕರಣವನ್ನು ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರೆ.

    ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts