More

    ಮದ್ಯ ವ್ಯಾಪಾರಿಗೆ ಸೇರಿದ 400 ಕೋಟಿ ರೂ. ಮೌಲ್ಯದ ಫಾರ್ಮ್ ಹೌಸ್ ಧ್ವಂಸ!

    ನವದೆಹಲಿ: ಉತ್ತರಪ್ರದೇಶ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅವರ 400 ಕೋಟಿ ರೂ. ಮೌಲ್ಯದ ಅಕ್ರಮ ಫಾರ್ಮ್ ಹೌಸ್ ಅನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ.

    ಇದನ್ನೂ ಓದಿ: ಗುಜರಾತ್ ಟೈಟಾನ್ಸ್‌ನ ತಂಡದ ಯುವ ಆಟಗಾರನಿಗೆ ಬೈಕ್​ ಆ್ಯಕ್ಸಿಡೆಂಟ್, ಆಸ್ಪತ್ರೆಗೆ ದಾಖಲು!

    ಸ್ಥಳೀಯ ಛತ್ರಪುರ ಪ್ರದೇಶದಲ್ಲಿ ಮದ್ಯದ ವ್ಯಾಪಾರಿ ಪಾಂಟಿ ಚಡ್ಡಾ ಅವರ ಕುಟುಂಬಕ್ಕೆ ಸೇರಿದ ತೋಟದ ಮನೆ ಇದೆ. ಇದರ ಮೌಲ್ಯ ಬರೋಬ್ಬರಿ 400 ಕೋಟಿಗೂ ಹೆಚ್ಚು. ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಗರದಲ್ಲಿ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣ ತೆರವು ಕಾರ್ಯಾಚರಣೆ ಆರಂಭಿಸಿರುವ ಡಿಡಿಎ ಭಾರೀ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದೆ.

    delhi

    ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಮುಂದುವರಿದಿದ್ದು ಸುಮಾರು 10 ಎಕರೆಯಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಿದ್ದ ಮದ್ಯದ ಉದ್ಯಮಿ ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಫಾರ್ಮ್‌ಹೌಸ್ ಅನ್ನು ನೆಲಸಮಗೊಳಿಸಿದೆ. ಈ ಫಾರ್ಮ್‌ಹೌಸ್‌ ಸುಮಾರು 400 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸತತ ಎರಡು ದಿನಗಳ ಕಾರ್ಯಾಚರಣೆ ಮೊದಲ ದಿನ ಶುಕ್ರವಾರ ಐದು ಎಕರೆ ಹಾಗೂ ಶನಿವಾರ ಮುಖ್ಯ ಕಟ್ಟಡವನ್ನು ಕೆಡವಿ 10 ಎಕರೆ ಭೂಮಿಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ. ದಿವಂಗತ ಪಾಂಟಿ ಚಡ್ಡಾ ಅಲಿಯಾಸ್ ಗುರುದೀಪ್ ಸಿಂಗ್ ಅವರ ಸಂಸ್ಥೆ ಅಥವಾ ಕುಟುಂಬಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಜನವರಿ 13 ರಿಂದ 17 ರವರೆಗೆ ಈಶಾನ್ಯ ದೆಹಲಿ ಗೋಕುಲಪುರಿಯಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ. ಈ ಕ್ರಮದಲ್ಲಿ ಪ್ರಮುಖ ವಾಣಿಜ್ಯ ಶೋರೂಂಗಳನ್ನು ನೆಲಸಮ ಮಾಡಿ ನಾಲ್ಕು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts