More

    IPL 2024: ಗುಜರಾತ್ ಟೈಟಾನ್ಸ್‌ನ ತಂಡದ ಯುವ ಆಟಗಾರನಿಗೆ ಬೈಕ್​ ಆ್ಯಕ್ಸಿಡೆಂಟ್, ಆಸ್ಪತ್ರೆಗೆ ದಾಖಲು!

    ಮುಂಬೈ: ಗುಜರಾತ್ ಟೈಟಾನ್ಸ್‌ನ ಆಟಗಾರ ರಾಬಿನ್ ಮಿಂಜ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿರುವ 21 ವರ್ಷ ವಯಸ್ಸಿನ ರಾಬಿನ್​​ ಮಿಂಜ್​ ಸದ್ಯ ಆಸ್ಪ್ರತೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಯುವ ಆಟಗಾರನನ್ನು ಗುಜರಾತ್​ ತಂಡ ಹರಾಜಿನಲ್ಲಿ 3.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

    ಇದನ್ನೂ ಓದಿ:ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಕವಾಸಕಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಮತ್ತೊಂದು ಬೈಕ್​ಗೆ​ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ವಿಕೆಟ್​ ಕೀಪರ್​ ಮಿಂಜ್​​ ಅವರ ಮೊಣಕಾಲಿಗೆ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿಯನ್ನು ಅವರ ತಂದೆ ಫ್ರಾನ್ಸಿಸ್ ಮಿನ್ಜ್ ಅವರು ಖಚಿತಪಡಿಸಿದ್ದಾರೆ. ರಾಬಿನ್ ಅವರಿಗೆ ಕೇವಲ ಸಣ್ಣ ಗಾಯಗಳಾಗಿದ್ದು ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದಾರೆ.

    ಅಪಘಾತದ ನಂತರ ಸೂಪರ್‌ಬೈಕ್‌ನ ಮುಂಭಾಗದ ಅರ್ಧಭಾಗವು ತೀವ್ರವಾಗಿ ಹಾನಿಗೊಳಗಾಗಿದೆ. ಎಡಗೈ ಆಟಗಾರನ ಬಲ ಮೊಣಕಾಲಿನ ಮೇಲೆ ಕೆಲವು ಗಾಯಗಳಾಗಿದೆ ಎಂದು ಹೇಳಲಾಗಿದೆ.

    ಕರ್ನಾಟಕ ವಿರುದ್ಧ ಕರ್ನಲ್ CK ನಾಯುಡು ಟ್ರೋಫಿ ಕ್ವಾರ್ಟರ್-ಫೈನಲ್‌ನಲ್ಲಿ ಜಾರ್ಖಂಡ್‌ಗಾಗಿ ಆಡಿದ ನಂತರ ರಾಬಿನ್​​ ಇತ್ತೀಚೆಗೆ ಮನೆಗೆ ಬಂದಿದ್ದರು. ಅಲ್ಲದೇ ಮನೆಗ ಬಂದ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸದ್ಯ ರಾಬಿನ್​ ಮಿಂಜ್​ ಅಪಾಯದಿಂದ ಪಾರಾಗಿದ್ದು, ಸುರಕ್ಷಿತರಾಗಿದ್ದಾರೆ ಎಂದು ಹೇಳಲಾಗಿದೆ.

    ರಾಬಿನ್ ಅವರು ಸಾಮಾನ್ಯ ಕುಟುಂಬಕ್ಕೆ ಸೇರಿದವರು, ಅಲ್ಲಿ ಅವರ ತಂದೆ ಕ್ಸೇವಿಯರ್ ಫ್ರಾನ್ಸಿಸ್ ಮಾಜಿ ಸೈನಿಕರಾಗಿದ್ದಾರೆ. ಅವರ ತಾಯಿ ಆಲಿಸ್ ಮಿಂಜ್ ಗೃಹಿಣಿ. ಆರಂಭಿಕ ಹಂತಗಳಲ್ಲಿ ರಾಬಿನ್ ಹಣಕಾಸಿನ ಸಮಸ್ಯೆಗಳೊಂದಿಗೆ ಹೋರಾಡಬೇಕಾಗಿತ್ತು. ಕಳೆದ ಕಲ ದಿನಗಳ ಹಿಂದೆಯಷ್ಟೇ ರಾಬಿನ್​ ಅವರ ತಂದೆಯನ್ನು ಶುಭ್​ಮನ್ ಗಿಲ್​ ಭೇಟಿ ಆಗಿದ್ದರು.

    ಹೊಡಿಬಡಿ ಆಟದ ಮೂಲಕ ಎದುರಾಳಿ ಬೌಲರ್​ಗಳ ಬೆವರಿಳಿಸಿ ಹೆಸರುವಾಸಿಯಾಗಿರುವ ರಾಬಿನ್​ ಮಿಂಜ್ ಎಂಎಸ್​ ಧೋನಿಯ ನಿಷ್ಠಾವಂತ ಅಭಿಮಾನಿ. ಅವರ ಕ್ರಿಕೆಟ್ ಪಯಣವನ್ನು ಅನುಭವಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ಅವರು ಮಾರ್ಗದರ್ಶನ ಮಾಡಿದ್ದಾರೆ. ಅವರು ಮಾಜಿ ಭಾರತೀಯ ನಾಯಕನಿಗೆ ಮಾರ್ಗದರ್ಶನ ನೀಡಿದ್ದಾರೆ. ಏತನ್ಮಧ್ಯೆ ಐಪಿಎಲ್​ ಹರಾಜಿನಲ್ಲಿ ಜಾರ್ಖಂಡ್​ನ ರಾಬಿನ್​ ಮಿಂಜ್​ ಅವರನ್ನು ಗುಜರಾತ್​ ಟೈಟಾನ್ಸ್​ 3.6 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು.

     

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts