More

    ಲಿಂಗಾಯತ ಮಹಾ ಅಧಿವೇಶನ ಯಶಸ್ವಿಗೊಳಿಸಿ

    ಮಸ್ಕಿ: ಬಸವಕಲ್ಯಾಣದಲ್ಲಿ ಮಾ.4 ಮತ್ತು 5 ರಂದು ನಡೆಯಲಿರುವ ರಾಷ್ಟ್ರೀಯ ಲಿಂಗಾಯತ ಮಹಾ ಅಧೀವೇಶನದಲ್ಲಿ ಪ್ರತಿಯೊಬ್ಬ ಲಿಂಗಾಯತರು ಭಾಗವಹಿಸಬೇಕೆಂದು ಮಹಾಸಭಾ ಜಿಲ್ಲಾಧ್ಯಕ್ಷ ಪಿ.ರುದ್ರಪ್ಪ ಹೇಳಿದರು.

    ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಲಿಂಗಾಯತ ಸಮುದಾಯದ ಪ್ರಮುಖರ ಸಭೆಯಲ್ಲಿ ಬುಧವಾರ ಸಂಜೆ ಮಾತನಾಡಿದರು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ಸಿಕ್ಕರೆ ಸಮುದಾಯದ ಒಳಪಂಗಡಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲಾತಿಗೆ, ವ್ಯಾಪಾರ ಹಾಗೂ ಉದ್ದಿಮೆ ಬೆಳೆಸಲು ಹಣಕಾಸು ಸೌಲಭ್ಯ ಸಿಗಲಿದೆ ಎಂದರು.

    ಲಿಂಗಾಯತ ಧರ್ಮದ ಒಳ ಪಂಗಡಗಳ ಜನರಿಗೆ ರಾಜ್ಯ ಸರ್ಕಾರ ವಿವಿಧ ರೀತಿಯ ಮೀಸಲಾತಿ ಕಲ್ಪಿಸಿದೆ ಆದರೆ, ಕೇಂದ್ರದಿಂದ ಅಲ್ಪಸಂಖ್ಯಾತ ಮಾನ್ಯತೆ ಪಡೆದರೆ ಹೆಚ್ಚು ಲಾಭ ಪಡೆಯಬಹುದು. ಧಾರ್ಮಿಕ ಅಲ್ಪಸಂಖ್ಯಾತ ಬೇರೆ, ಜಾತಿ ಮೀಸಲಾತಿ ಬೇರೆ. ಒಂದಕ್ಕೊಂದನ್ನು ತಳಕು ಹಾಕದೆ ಎಲ್ಲರೂ ಒಗ್ಗಟ್ಟಾಗದಿದ್ದರೆ ನಮ್ಮ ಮಕ್ಕಳಿಗೆ ಉಳಿಗಾಲ ಇಲ್ಲ. ಅದಕ್ಕಾಗಿ ಲಿಂಗಾಯತ ಮಹಾ ಅಧಿವೇಶನ ಏರ್ಪಡಿಸಲಾಗಿದೆ ಎಂದರು.

    ಮಹಾಸಭಾ ತಾಲೂಕು ಸಂಚಾಲಕ ಡಾ.ಬಿ.ಎಚ್.ದಿವಟರ್ ಮಾತನಾಡಿ, ಫೆ.26ರಂದು ಭ್ರಮರಾಂಬ ದೇವಸ್ಥಾನದಲ್ಲಿ ಲಿಂಗಾಯತ ಒಳಪಂಗಡಗಳ ಪ್ರಮುಖರ ಸಭೆ ಕರೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts