More

    ಬಡವರ ಹೊಟ್ಟೆಮೇಲೆ ಸರ್ಕಾರದ ಬರೆ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಆರೋಪ

    ಲಿಂಗಸುಗೂರು: ಇಂಧನ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಹೊಟ್ಟೆಮೇಲೆ ಬರೆ ಎಳೆದಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಆರೋಪಿಸಿದರು.

    ಪಟ್ಟಣದ ದೊಡ್ಡಹನುಮಂತ ದೇವಸ್ಥಾನ ಮುಂಭಾಗದಲ್ಲಿ ಬ್ಲಾಕ್ ಕಾಂಗ್ರೆಸ್ ಗುರುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರು, ರೈತರು, ಕಾರ್ಮಿಕರ ಒಳಿತಿಗಾಗಿ ನಿಲ್ಲದೆ ಕಾರ್ಪೋರೇಟ್ ಕಂಪನಿಗಳ ಪರ ನಿಂತಿವೆ. ಕರೊನಾ ನಿರ್ವಹಣೆಯಲ್ಲೂ ವಿಫಲವಾಗಿವೆ ಎಂದು ಆರೋಪಿಸಿವೆ.

    ಕರೊನಾ ಸೋಂಕಿನಿಂದ ಮೃತ ಪಟ್ಟವರ ಸಮೀಕ್ಷೆಯನ್ನು ಪಕ್ಷದ ಕಾರ್ಯಕರ್ತರು ನಡೆಸಿ ವರದಿ ನೀಡಬೇಕು. ಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಅನುಕೂಲವಾಗುವುದು ಎಂದರು.

    ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಮಾತನಾಡಿ, ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. 7 ವರ್ಷದ ಹಿಂದೆ ರೈತರ ಏಳಿಗೆ, ಉದ್ಯೋಗ ಸೃಷ್ಟಿ, ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪುಹಣ ಮರಳಿ ತರುವುದು ಮೊದಲಾದ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗಳು ಹುಸಿಯಾಗಿವೆ. ಬಿಜೆಪಿ ಸರ್ಕಾರ ಗೋ ಮುಖ ವ್ಯಾಘ್ರದಂತಿದೆ. ಎಲ್ಲರನ್ನೂ ಸಮಾನವಾಗಿ ಸ್ವೀಕರಿಸಿ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.

    ಶಾಸಕರಾದ ಡಿ.ಎಸ್.ಹೂಲಗೇರಿ, ಬಸನಗೌಡ ದದ್ದಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ, ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ದೇಸಾಯಿ, ಮುಖಂಡರಾದ ಶರಣಪ್ಪ ಮೇಟಿ, ಲಾಲಅಹ್ಮದ್ ಸಾಬ, ಸಂಗಣ್ಣ ಬಯ್ಯಪುರ, ಹನುಮಂತಪ್ಪ ಕಂದಗಲ್, ಚಂದ್ರಕಾಂತ ನಾಡಗೌಡ, ಸೈಯದ್ ಖಾದ್ರಿ, ದಾವೂದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts