More

    ವರುಣನ ಅವಕೃಪೆಯಿಂದ ಬರಗಾಲ ಭೀತಿ, ರಾಯಚೂರನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಲು ರೈತ ಸಂಘ ಒತ್ತಾಯ

    ಲಿಂಗಸುಗುರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಬಾರದೆ ಬರಗಾಲ ಭೀತಿ ಆವರಿಸಿದ್ದು, ಸರ್ಕಾರ ರಾಯಚೂರನ್ನು ಬರಪೀಡಿತ ಜಿಲ್ಲೆಯಾಗಿ ಘೋಷಿಸಬೇಕೆಂದು ಒತ್ತಾಯಿಸಿ ಹೈ.ಕ. ರೈತಸಂಘ ಹಾಗೂ ಅನ್ನದಾತ ಬ್ರಿಗೇಡ್ ಸಂಘಟನೆ ಮುಖಂಡರು ಎಸಿ ಕಚೇರಿ ಸಿಬ್ಬಂದಿ ಅನುಪಮಾ ಸಿಂಗ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ರಾಜ್ಯದಲ್ಲಿ ಬರಗಾಲ ಆವರಿಸಿ ಸಣ್ಣ ಅತಿಸಣ್ಣ ರೈತರು, ಬಡವರು, ವಲಸೆ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ದೇಶಕ್ಕೆ ಮಾರಕವಾದ ಉದಾರ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುವ ಸರ್ಕಾರದ ನೀತಿಯಿಂದ ಹಾಗೂ ಕಾರ್ಮಿಕ ಕಾಯ್ದೆ ಅಮಾನತ್ತುಗೊಳಿಸಲು ಮುಂದಾಗಿರುವುದು ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆ ರಾಯಚೂರು ಅಭಿವೃದ್ಧಿಯಿಂದ ವಂಚಿತಗೊಂಡಿದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಚಳ್ಳಕೆರೆ ಬರ ಪೀಡಿತ ಎಂದು ಘೋಷಿಸಿ

    ಬ್ಯಾಂಕುಗಳ ಆಡಳಿತ ವರ್ಗದ ಸರ್ವಾಧಿಕಾರಿ ಧೋರಣೆ ನಿಲ್ಲಿಸಿ ರೈತರಿಗೆ ಮರು ಸಾಲ ಪಾವತಿಗೆ ಅವಕಾಶ ನೀಡಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಅನುಕೂಲಕ್ಕಾಗಿ ರೈತ ಭವನ ನಿರ್ಮಿಸಬೇಕು. ಬರಗಾಲದಿಂದ ತತ್ತರಿಸಿದ ಕೃಷಿಕರಿಗೆ ಬೆಳೆ ಪರಿಹಾರ ನೀಡಬೇಕು. ಬೆಳೆವಿಮೆ ಸಕಾಲಕ್ಕೆ ಒದಗಿಸಬೇಕು. ಕೃಷಿ ಸಾಲಮನ್ನಾ ಮನ್ನಾ ಮಾಡಬೇಕು. ಲಿಂಗಸುಗೂರು ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ರಾಯಚೂರಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಡಾ.ಶಾಮೀದಲಿ ಕರಡಕಲ್, ತಾಲೂಕು ಅಧ್ಯಕ್ಷ ಕಾಳಪ್ಪ ಬಡಿಗೇರ, ಜಿಲ್ಲಾ ಪ್ರ.ಕಾರ್ಯದರ್ಶಿ ಶಿವಣ್ಣ ಪರಂಗಿ, ಗೌರವಾಧ್ಯಕ್ಷ ಆದಪ್ಪ, ಉಪಾಧ್ಯಕ್ಷ ನಾಗರಾಜ ಅಸ್ಕಿಹಾಳ, ಗದ್ದೆಪ್ಪಗೌಡ, ಬಸಯ್ಯ ಹಿರೇಮಠ, ಯಮನಪ್ಪ, ಗದ್ದೆಪ್ಪ, ಹನುಮಂತ, ಯಂಕಣ್ಣ, ಬಂಡೆಪ್ಪ, ಮೌನೇಶ, ಕುಪ್ಪಣ್ಣ, ನಾಗರಾಜ, ಶಿವಪ್ಪ, ಅಮರಪ್ಪ, ಶರಣಪ್ಪ, ಮಲ್ಲಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts