More

    ಶಾಂತಿಯುತ ಆಚರಣೆ ಮಾಡಿ

    ಲಿಂಗಸುಗೂರು: ಗೌರಿ-ಗಣೇಶ ಹಬ್ಬವನ್ನು ನಿಯಮಗಳ ಪಾಲನೆಯೊಂದಿಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಣೆ ಮಾಡಬೇಕೆಂದು ಡಿವೈಎಸ್ಪಿ ಮಂಜುನಾಥ ಮನವಿ ಮಾಡಿದರು.

    ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿ ಪಾಲನಾ ಸಭೆಯಲ್ಲಿ ಗುರುವಾರ ಸಂಜೆ ಮಾತನಾಡಿದರು. ಪ್ರತಿಯೊಂದು ಧರ್ಮದಲ್ಲಿ ಹಬ್ಬಗಳು ಸಂತೋಷ ಮತ್ತು ನೆಮ್ಮದಿಗಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಆಚರಿಸಬೇಕು. ಮಂಡಳಿಗಳು ಸರ್ಕಾರಿ ಜಾಗದಲ್ಲಿ ಪ್ರತಿಷ್ಠಾಪಿಸುವುದಾದರೆ ಸಂಬಂಧಿಸಿದ ಪುರಸಭೆ, ಗ್ರಾಪಂನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಖಾಸಗಿ ಜಾಗದಲ್ಲಿ ಪ್ರತಿಷ್ಠಾಪಿಸಿದರೆ ಆಯಾ ಸ್ಥಳದ ಮಾಲೀಕರಿಂದ ಬರವಣಿಗೆಯಲ್ಲಿ ಅನುಮತಿ ಪಡೆಯಬೇಕು ಎಂದರು.

    ಮಂಟಪಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜೆಸ್ಕಾಂನಿಂದ ಅನುಮತಿ ಪಡೆಯಬೇಕು. ಬೃಹತ್ ಪ್ರಮಾಣದ ಪೆಂಡಾಲ್ ಹಾಕಿದರೆ ಪಿಡಬ್ಲ್ಯೂಡಿ ಇಲಾಖೆ ದೃಢೀಕರಣ ಪತ್ರ ಪಡೆಯಬೇಕು. ಪೊಲೀಸ್ ಇಲಾಖೆ ಅನುಮತಿ ಪಡೆಯದೆ ಧ್ವನಿವರ್ಧಕ ಬಳಸುವಂತಿಲ್ಲ. ಮೆರವಣಿಗೆಗೆ ಪೊಲೀಸರ ಅನುಮತಿ ಪಡೆಯಬೇಕು. ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಕನಿಷ್ಟ ಇಬ್ಬರು ಸ್ವಯಂ ಸೇವಕರು ಕರ್ತವ್ಯ ನಿರತರಾಗಿರಬೇಕು. ಗಣೇಶ ಮಂಟಪದಲ್ಲಿ ಅಶ್ಲೀಲ ಚಿತ್ರಗೀತೆಗಳು, ಕೋಮುಭಾವನೆ ಕೆರಳಿಸುವ ಹಾಡು, ಘೋಷಣೆ, ಭಾಷಣ ಬಿತ್ತರಿಸಕೂಡದು. ಗಣೇಶ ಮಂಟಪದಲ್ಲಿ ಪೊಲೀಸ್, ಜೆಸ್ಕಾಂ, ಅಂಬುಲೆನ್ಸ್, ಅಗ್ನಿಶಾಮಕ ಇಲಾಖೆ ಮೊಬೈಲ್ ಸಂಖ್ಯೆ ಸಹಿತ ನಾಮಫಲಕ ಹಾಕಬೇಕೆಂಬ ಸುಮಾರು 26 ನಿಯಮಗಳ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts