More

    ಅಭಿವೃದ್ಧಿ ತಡೆಯುವ ಉದ್ದೇಶದಿಂದ ರದ್ಧತಿ

    ಲಿಂಗಸುಗೂರು: ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ತೀರ್ಮಾನ ಜನ ವಿರೋಧಿ ಕ್ರಮವಾಗಿದ್ದು, ಕೂಡಲೇ ಈ ಕುರಿತ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ತಂಜಿಮುಲ್ ಮುಸ್ಲಿಮಿನ್ ಕಮಿಟಿ ಮತ್ತು ಬಿಎಸ್‌ಪಿ ಪ್ರಮುಖರು ಶನಿವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

    ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಇದರಿಂದಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗವೆಂದು ಪರಿಗಣಿಸಿ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರಡ್ಡಿ ಆಯೋಗದ ವರದಿಯಂತೆ ಮುಸ್ಲಿಮರಿಗೆ 2ಬಿ ಮೀಸಲಾತಿ ಕಲ್ಪಿಸಲಾಗಿತ್ತು.

    ಮುಸ್ಲಿಂ ಸಮುದಾಯದ ಅಭಿವೃದ್ಧಿ ತಡೆಯುವ ಉದ್ದೇಶದಿಂದ ಬಿಜೆಪಿ ಸರ್ಕಾರ ಮೀಸಲಾತಿ ರದ್ದುಪಡಿಸಿದ್ದು, ಇದು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ತಂಜಿಮುಲ್ ಮುಸ್ಲಿಮಿನ್ ಕಮಿಟಿ ದೂರಿತು.

    ಮುಸ್ಲೀಮರಿಗೆ ನೀಡಲಾಗಿದ್ದ ಶೇ. 4 ಮೀಸಲಾತಿಯನ್ನು ಕಸಿದುಕೊಂಡು ಒಕ್ಕಲಿಗರು ಮತ್ತು ಲಿಂಗಾಯತರಿಗೆ ನೀಡಿರುವುದು ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಮಾಡಿದ ವಂಚನೆಯಾಗಿದೆ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ಕೂಡಲೇ ರದ್ಧತಿ ನಿರ್ಣಯ ಹಿಂಪಡೆಯಬೇಕೆಂದು ಬಿಎಸ್ಪಿ ಪ್ರಮುಖರು ಒತ್ತಾಯಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts