More

    ರೈತರೇ ಬೆಲೆ ನಿಗದಿ ಪಡಿಸುವ ದಿನ ದೂರವಿಲ್ಲವೆಂದ ಸಂಯುಕ್ತ ಕಿಸಾನ್ ಮೋರ್ಚಾ ನವದೆಹಲಿ ರೈತ ಮುಖಂಡ ಹರನೇಕ್ ಸಿಂಗ್

    ಲಿಂಗಸುಗೂರು: ದಿನ ಬಳಕೆ ವಸ್ತುಗಳಿಗೆ ಆಯಾ ಕಂಪನಿಗಳು ಬೆಲೆ ನಿಗದಿ ಪಡಿಸಿದಂತೆ, ಕೃಷಿ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಪಡಿಸುವ ದಿನ ಬರುವುದು ದೂರವಿಲ್ಲ. ಆದರೆ, ರೈತರು ಜಾತಿ, ಮತ, ಪಂಥ, ಧರ್ಮ ಬೇಧ ಮರೆತು ಸಂಘಟನಾತ್ಮಕ ಹೋರಾಟಕ್ಕೆ ಸನ್ನದ್ಧರಾಗಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ನವದೆಹಲಿ ರೈತ ಮುಖಂಡ ಹರನೇಕ್ ಸಿಂಗ್ ಹೇಳಿದರು.

    ಪಟ್ಟಣದ ಶಾದಿಮಹಲ್ ಮುಂಭಾಗ ಸಮಗ್ರ ನೀರಾವರಿ ಹಕ್ಕು ರಕ್ಷಣಾ ವೇದಿಕೆ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶ ಸೋಮವಾರ ಉದ್ಘಾಟಸಿ ಮಾತನಾಡಿದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಬೀಜ, ಗೊಬ್ಬರ, ಕ್ರಿಮಿನಾಶಕ, ಟ್ರಾಕ್ಟರ್ ಸೇರಿದಂತೆ ಕೃಷಿ ಸಲಕರಣೆಗಳ ತಯಾರಿಕಾ ಕಂಪನಿಗಳ ಮಾಲೀಕರು ಮತ್ತು ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾ ಪಟುಗಳು, ಚಿತ್ರನಟರು, ಕಾರ್ಪೋರೇಟ್ ಕಂಪನಿಗಳ ಮಾಲೀಕರು ಇಂದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ, ರೈತರು ಬೆಳೆದ ಬೆಳೆಗಳಿಗೆ ವರ್ತಕರು, ದಲ್ಲಾಳಿಗಳು, ಮಧ್ಯವರ್ತಿಗಳು ಬೆಲೆ ನಿಗದಿ ಮಾಡುತ್ತಾರೆ. ಇದರಿಂದ ರೈತ ಸಾಲಗಾರನಾಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಗೆ ಬಂದಿದ್ದಾನೆ. ರೈತರು ತಮ್ಮ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹೋರಾಟದ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತಿದೆ. ಹೋರಾಟ ಮಾಡಲು ಹಿಂಜರಿಯದೆ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹೋರಾಟಕ್ಕೆ ಸನ್ನದ್ಧರಾಗಬೇಕೆಂದು ಹೇಳಿದರು.

    ರೈತ ಸಂಘಟನೆಗಳ ಮುಖಂಡರಾದ ಸಿರಿಮನೆ ನಾಗರಾಜ, ಆರ್. ಮಾನಸಯ್ಯ, ಚಾಮರಸ ಮಾಲಿಪಾಟೀಲ್, ಅಮರಣ್ಣ ಗುಡಿಹಾಳ, ಅಮೀನಪಾಷಾ ದಿದ್ದಿಗಿ, ಚಿನ್ನಪ್ಪ ಕೊಟ್ರಿಕಿ, ಅಹ್ಮದ್ ಛಾವುಸ್, ಸೈಯದ್ ಯೂನೂಸ್ ಖಾಸ್ಮಿ, ನಿಂಗಪ್ಪ ಪರಂಗಿ, ಅನಿಲ್ ಕುಮಾರ, ಮಲ್ಲಿಕಾರ್ಜುನ, ಗೌಸಸಾಬ, ತಿಪ್ಪರಾಜ, ಶಾಂತಕುಮಾರ ಸೇರಿದಂತೆ ಇತರರು ಇದ್ದರು.

    ದೆಹಲಿಯ ಬಾರ್ಡರ್‌ನಲ್ಲಿ ರೈತರ ಧರಣಿ, ಹೋರಾಟ ನಡೆಯುತ್ತಿಲ್ಲ. ಸರ್ಕಾರ ಮತ್ತು ರೈತರ ಮಧ್ಯೆ ಯುದ್ಧ ನಡೆಯುತ್ತಿದೆ. ಪಂಜಾಬ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳು ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿವೆ. ಹೋರಾಟದಲ್ಲಿ ಕರ್ನಾಟಕ ರೈತರು ಹಿಂದುಳಿದಿದ್ದಾರೆ. ನಾವು ಕೈ ಹಿಡಿದು ರೈತ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಂದಿದ್ದೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts