More

    ಯರಡೋಣಾ ಕ್ರಾಸ್‌ನಲ್ಲಿ ಟಿಸಿ ನಿಯೋಜನೆ

    ಹಟ್ಟಿಚಿನ್ನದಗಣಿ: ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (150ಎ) ಹಟ್ಟಿಚಿನ್ನದಗಣಿ ಸಮೀಪದ ಯರಡೋಣಾ ಕ್ರಾಸ್‌ನಲ್ಲಿ ಲಿಂಗಸುಗೂರು ಡಿಪೋದಿಂದ ಸೋಮವಾರ ಸಂಚಾರ ನಿಯಂತ್ರಕರನ್ನು ನಿಯೋಜಿಸಲಾಗಿದೆ.

    ಹಟ್ಟಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯರಡೋಣಾ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ 6 ವರ್ಷಗಳ ಹಿಂದೆ ಆದೇಶ ಹೊರಡಿಸಲಾಗಿತ್ತು. ಆದರೆ, ಕೆಲ ಬಸ್‌ಗಳ ಚಾಲಕ-ನಿರ್ವಾಹಕರು ಆದೇಶ ಪಾಲಿಸುತ್ತಿರಲಿಲ್ಲ. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು.

    ಯರಡೋಣಾ ಕ್ರಾಸ್‌ನಲ್ಲಿ ಬಸ್ ನಿಲ್ಲಿಸಲು ಕ್ರಮಕೈಗೊಳ್ಳಬೇಕೆಂದು ‘ಬಸ್ ಸಮಸ್ಯೆ, ಪ್ರಯಾಣಿಕರಿಗೆ ಸಂಕಷ್ಟ’ ಶೀರ್ಷಿಕೆಯಡಿ ಭಾನುವಾರ ವಿಜಯವಾಣಿಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಯರಡೋಣಾ ಕ್ರಾಸ್‌ನಲ್ಲಿ ಸಂಚಾರ ನಿಯಂತ್ರಕರನ್ನು ನಿಯೋಜಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts