More

  ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ

  ಹಟ್ಟಿಚಿನ್ನದಗಣಿ: ಒತ್ತಡದ ಜೀವನದಿಂದಾಗಿ ಸಾರ್ವಜನಿಕರ ಬದುಕಿನಲ್ಲಿ ಶಾಂತಿ ಇಲ್ಲದಂತಾಗಿದ್ದು, ಯೋಗ, ಪ್ರವಚನ, ಸಂಗೀತ ಕಾರ್ಯಕ್ರಮ ಹಾಗೂ ಆಧ್ಯಾತ್ಮದಲ್ಲಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದು ಧಾರವಾಡದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ರಾಜಯೋಗಿನಿ ಡಾ.ಬಿ.ಕೆ.ಪದ್ಮಾ ಅಕ್ಕ ಹೇಳಿದರು.

  ಬಸವ ಸೇವಾ ಸಮಿತಿಯಲ್ಲಿ ಒತ್ತಡ ಮುಕ್ತ ಹಾಗೂ ಸುಂದರ ಬದುಕಿಗಾಗಿ ಜೀವನ ಶಿಕ್ಷಣ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು. ಶ್ರೀಮಂತಿಕೆ, ವಿದ್ಯೆ, ಉತ್ತಮ ಉದ್ಯೋಗವಿದ್ದರೂ ಬಹುತೇಕರ ಬದುಕಿನಲ್ಲಿ ಶಾಂತಿ-ನೆಮ್ಮದಿ ಕೊರತೆ ಕಂಡುಬರುತ್ತಿದೆ ಎಂದರು.

  ವಿದ್ಯಾರ್ಥಿ ಜೀವನದಿಂದಲೇ ಮಕ್ಕಳಲ್ಲಿ ಸಂಸ್ಕಾರ ಹಾಗೂ ಗುಣಮಟ್ಟದ ಆಹಾರ ಸೇವನೆ ಪದ್ಧತಿ ಬೆಳೆಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅಂತರ ಕಾಯ್ದುಕೊಳ್ಳಬೇಕು. ಕಾರ್ಯ ಯಶಸ್ಸಿಗೆ ಪೂರ್ವಾಪರ ಯೋಜನೆ ಮೂಲಕ ಯಶಸ್ಸು ಕಂಡುಕೊಳ್ಳಬೇಕೆಂದು ಪದ್ಮಾ ಅಕ್ಕ ಸಲಹೆ ನೀಡಿದರು.
  ಸರ್ಕಾರಿ ಆಸ್ಪತ್ರೆ ಉಪ ವ್ಯವಸ್ಥಾಪಕ ಡಾ.ಎನ್.ಸಂತೋಷ್, ಗೌಡೂರು ತಾ.ಪಂ. ಮಾಜಿ ಸದಸ್ಯ ರಾಜಾ ಸೇತುರಾಂ ನಾಯಕ್, ಎಸ್ಡಿಎಂಸಿ ಅಧ್ಯಕ್ಷ ಮೌಲಾಸಾಬ್, ಸೀಮಂಡ್ಸ್ ಶಾಲೆ ಮುಖ್ಯ ಶಿಕ್ಷಕ ಜಿ.ಆನಂದ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts