More

    ನಡುಗಡ್ಡೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹ

    ಲಿಂಗಸುಗೂರು: ತಾಲೂಕಿನ ಕೃಷ್ಣಾ ನದಿ ತೀರದ ನಡುಗಡ್ಡೆ ಪ್ರದೇಶಗಳಾದ ಮ್ಯಾದರಗಡ್ಡಿ, ಕರಕಲಗಡ್ಡಿ, ವೆಂಕಮ್ಮನಗಡ್ಡಿ, ತವದಗಡ್ಡಿಗಳ 50ಕ್ಕೂ ಹೆಚ್ಚು ರೈತ ಕುಟುಂಬಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಮಂಗಳವಾರ ಎಸಿ ರಾಹುಲ್ ಸಂಕನೂರು ಅವರಿಗೆ ಮನವಿ ಸಲ್ಲಿಸಿದರು.

    ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಾಗ ಪ್ರವಾಹ ಉಂಟಾಗಿ ನಡುಗಡ್ಡೆ ಪ್ರದೇಶದ ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. ಈ ವೇಳೆ ಒತ್ತಾಯ ಪೂರ್ವಕವಾಗಿ ಗಂಜಿ ಕೇಂದ್ರದಲ್ಲಿ ಕರೆತಂದು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಒಕ್ಕಲೆಬ್ಬಿಸುತ್ತ ಬರುತ್ತಿದ್ದಾರೆ. ಆದರೆ ಅವರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ಬೇಜವಾಬ್ದಾರಿ ತೋರಲಾಗುತ್ತಿದೆ ಎಂದು ದೂರಿದರು.
    ಪ್ರತಿವರ್ಷ ಸದರಿ ರೈತ ಕುಟುಂಬಗಳ ಸ್ಥಳಾಂತರಕ್ಕೆ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ತಾವೇ ಹಾಕಿಕೊಂಡ ಟೆಂಟ್‌ನಲ್ಲಿ ಜೀವಿಸುತ್ತಿರುವ ರೈತ ಕುಟುಂಬಸ್ಥರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಸುಸಜ್ಜಿತ ಬಡಾವಣೆ ನಿರ್ಮಿಸಿ ಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 2009 ರಿಂದ 2021 ರವರೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ಇವರಿಗೆ ಖರ್ಚು ಮಾಡಿದ ವೆಚ್ಚವನ್ನು ಸಿಒಡಿ ತನಿಖೆಗೆ ವಹಿಸಿ ಸರ್ಕಾರ ನಡುಗಡ್ಡೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
    ಸಂಘದ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ತಾಲೂಕು ಸಂಚಾಲಕರಾದ ನಾಗರಾಜ ಹಾಲಬಾವಿ, ಅಕ್ರಂ ಪಾಷಾ, ಯಲ್ಲಪ್ಪ ಹಾಲಬಾವಿ, ಪರಶುರಾಮ ಗುಡಿಜಾವೂರ, ಅಮರೇಶ ಹಟ್ಟಿ, ಬಸವರಾಜ, ಹುಸೇನಪ್ಪ, ಹನುಮೇಶ, ಷಣ್ಮುಖರಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts