ಕಡೂರು: ಭೌತಿಕ ಬದುಕಿಗೆ ತಂದೆ-ತಾಯಿಗಳು ಕಾರಣರಾದರೆ ಆಧ್ಯಾತ್ಮದ ಬದುಕಿಗೆ ಗುರು ಮೂಲವಾಗುತ್ತಾನೆ. ಗುರು ಕಾರುಣ್ಯದಿಂದ ಮನುಷ್ಯನ ಬದುಕು ಉಜ್ವಲಗೊಳ್ಳಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಜ್ಜಂಪುರದ ಗೊಂಡೇದಹಳ್ಳಿ ಗ್ರಾಮದಲ್ಲಿ ಗ್ರಾಮದ ಸಭಾ ಭವನದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ 18ನೇ ವರ್ಷದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಗವಂತನ ಶಕ್ತಿ ಅದ್ಭುತ. ಆದರೆ ಕಣ್ಣಿಗೆ ಕಾಣುವುದಿಲ್ಲ. ಪರಶಿವನ ಸಾಕಾರ ರೂಪ ಶ್ರೀಗುರು. ಶಿವ ಮತ್ತು ಗುರುವಿನಲ್ಲಿ ಯಾವುದೇ ಭೇದವಿಲ್ಲ. ವೀರಶೈವ ಧರ್ಮದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಸಮರ್ಥ ಗುರುವಿನಿಂದ ಏನೆಲ್ಲ ಸೌಭಾಗ್ಯ ಸಂಪತ್ತು ಪ್ರಾಪ್ತಿಯಾಗುತ್ತದೆ. ಅಷ್ಟಾವರಣದಲ್ಲಿ ಗುರು ಮೊದಲಿಗನಾಗಿದ್ದು ಭವ ಬಂಧನದಿಂದ ಭಕ್ತನನ್ನು ಮುಕ್ತಗೊಳಿಸುವ ಶಕ್ತಿಯಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಅಜ್ಞಾನ ಕಳೆಯಲು ಗುರು ಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಸಿದ್ಧಾಂತದಲ್ಲಿ ಶ್ರೀ ಗುರುವಿನ ಪಾತ್ರ ಅಮೋಘ ಎಂದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ವಿಶ್ವ ಬಂಧುತ್ವ ಸಾರಿದ ಶ್ರೀಜಗದ್ಗುರು ರೇಣುಕಾಚಾರ್ಯರ ಚಿಂತನೆಗಳು ಜನಮನವನ್ನು ತಲುಪಬೇಕೆಂಬ ಸದುದ್ದೇಶದಿಂದ ಪ್ರತಿ ವರ್ಷ ಈ ಸಮಾರಂಭ ಜರುಗುತ್ತಿದೆ. ಜಾತಿ ಮತ ಜಂಜಡಗಳನ್ನು ಮೀರಿ ಧಾರ್ಮಿಕ ಮತ್ತು ಸಾಮಾಜಿಕ ಕಾಂತ್ರಿ ಮಾಡಿದ ಮೊದಲ ಶ್ರೇಯಸ್ಸು ಶ್ರೀರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
ದತ್ತಿ ಉಪನ್ಯಾಸ ನೀಡಿದ ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ಮಾತನಾಡಿ ದೈಹಿಕ ರೋಗ ನಿರೋಧಕ್ಕೆ ವೈದ್ಯ ಕಾರಣರಾದರೆ ಭವ ಬಂಧನ ಕಳೆಯಲು ಗುರುವಿನಿಂದ ಮಾತ್ರ ಸಾಧ್ಯ. ಅಂಗ ಅವಗುಣ ನೀಗಿ ಲಿಂಗ ಗುಣ ಸಂಸ್ಕಾರ ಕೊಡುವ ಮಹಾನ್ ಶಕ್ತಿ ಗುರುವಿಗೆ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾಂಶ ಸಂಭೂತರು. ಸಕಲ ಜೀವ ಸಂಕುಲಕ್ಕೆ ಸದಾ ಒಳಿತನ್ನು ಬಯಸಿದವರು. ಅವರು ಬೋಸಿದ ತತ್ವ ಸಿದ್ಧಾಂತಗಳು ಎಂದೆಂದಿಗೂ ದಾರಿದೀಪ. ಆ ದಾರಿಯಲ್ಲಿ ಮುನ್ನಡೆದು ಜೀವನವನ್ನು ಪಾವನಗೊಳಿಸಿಕೊಳ್ಳಬೇಕಿದೆ ಎಂದರು.
ತಾವರೆಕೆರೆ ಶಿಲಾ ಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವತ್ತ ಸೇನಾಕಾರಿ ಬಗ್ಗವಳ್ಳಿ ಸೋಮಶೇಖರ್ ರಾಜು ಸಮಾರಂಭವನ್ನು ಉದ್ಘಾಟಿಸಿದರು. ಪುಣ್ಯಕೋಟಿ ಗೋ ಸಂರಕ್ಷಣಾ ಪುರಸ್ಕಾರವನ್ನು ಚನ್ನಾಪುರದ ನಾಗಭೂಷಣ ಅವರಿಗೆ ಪ್ರದಾನ ಮಾಡಲಾಯಿತು.
ಗುರು ಕಾರುಣ್ಯದಿಂದ ಜೀವನ ಉಜ್ವಲ
ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್ ಇರಬಹುದು!!
ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….
ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…
ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್!
ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…