More

    ಲಿಡ್ಕರ್ ಅಧ್ಯಕ್ಷ ಸ್ಥಾನ ಸ್ವೀಕರಿಸುವುದಿಲ್ಲ ನಾಗೇಶ ಬದಲು ಬೇರೆಯವರಿಗೆ ಅವಕಾಶ ನೀಡಿ

    ಹಾವೇರಿ: ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ಅಧ್ಯಕ್ಷ ಸ್ಥಾನ ಸ್ವೀಕರಿಸುವುದಿಲ್ಲ. ಬಿಡಿಎ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಕೊಡಿ ಎಂದು ಸಿಎಂ ಅವರಲ್ಲಿ ವಿನಂತಿಸಿದ್ದೇನೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

    ನಗರದ ಜಿಪಂ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ನೀಡಿರುವ ನಿಗಮದಲ್ಲಿ ಜನರಿಗೆ ಹೆಚ್ಚು ಕೆಲಸ ಮಾಡಲು ಅವಕಾಶವಿಲ್ಲ. ಅದಕ್ಕಾಗಿ ಆ ನಿಗಮ ನನಗೆ ಬೇಡ. ಈ ವಿಷಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ರ್ಚಚಿಸಿದ್ದೇನೆ. ಬಿಜೆಪಿ ಶಾಸಕರಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ನಾನೊಬ್ಬನೇ ಇದ್ದು, ನನ್ನನ್ನು ಮಂತ್ರಿ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದರು.

    ನಾಗೇಶ ಬದಲು ಬೇರೆಯವರಿಗೆ ಅವಕಾಶ ಕೊಡಲಿ: ಪಕ್ಷೇತರ ಶಾಸಕ ನಾಗೇಶ ಅವರನ್ನು ಮಂತ್ರಿ ಮಾಡದಿದ್ದರೂ ನಡೆಯುತ್ತಿತ್ತು. ಅವರ ಬದಲು ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಮಾಡಿಕೊಡಬೇಕು ಎಂದರು.

    ಬಿಎಸ್​ವೈ ಜೊತೆಗಿದ್ದವರು ಹೊರಗೆ ಹೊರಗಿದ್ದವರು ಒಳಗೆ: ಮೂರು ಬಾರಿ ಶಾಸಕನಾಗಿದ್ದರೂ ಸಚಿವ ಸ್ಥಾನ ಸಿಗದೇ ಇರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಓಲೇಕಾರ, ಯಡಿಯೂರಪ್ಪ ಅವರು ಕೆಜೆಪಿ ಕಟ್ಟುವಾಗ ನಾವೆಲ್ಲ ಮೊದಲ ಸಾಲಿನಲ್ಲಿಯೇ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದೆವು. ಬಳಿಕ ಅವರೊಂದಿಗೆ ಪಕ್ಷಕ್ಕೆ ಬಂದು ಪ್ರಾಮಾಣಿಕವಾಗಿ ಅವರೊಂದಿಗೆ ಕೈಜೋಡಿಸಿದ್ದೆವು. ಆದರೆ, ಅಂದು ಅವರಿಗೆ ಬೆಂಬಲ ಕೊಟ್ಟವರೆಲ್ಲ ಹೊರಗಿದ್ದೇವೆ. ವಿರೋಧಿಸಿದವರೆಲ್ಲ ಸಂಪುಟದ ಒಳಗಿದ್ದಾರೆ. ಅವರ ಜೊತೆಗಿದ್ದವರೆಲ್ಲ ಹೊರಗಿದ್ದೇವೆ. ನಮ್ಮ ಹುಡುಗರು ಎಂಬ ಕಾರಣಕ್ಕೆ ಅವರು ಹೀಗೆ ಮಾಡಿರಬಹುದು. ನಮ್ಮನ್ನು ಮೊದಲ ಹಂತದಲ್ಲಿಯೇ ಸಂಪುಟಕ್ಕೆ ಪರಿಗಣಿಸಬೇಕಿತ್ತು. ಇದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಮುಂದಿನ 3 ವರ್ಷ ಬಿಎಸ್​ವೈ ಸಿಎಂ: ಸಿಎಂ ಬದಲಾವಣೆ ವಿಷಯ ಚರ್ಚೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಯಡಿಯೂರಪ್ಪನವರೇ ಮುಂದಿನ 3 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ. ಅವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ. ಸದ್ಯ ಹೈಕಮಾಂಡ್​ನಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts