More

    ಬಂದೂಕು ಬಳಕೆಗೆ ಪರವಾನಗಿ ಕಡ್ಡಾಯ

    ಚಿಕ್ಕಮಗಳೂರು: ಬಂದೂಕು ಹೊಂದಿರುವವರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಪರವಾನಗಿ ಸಮಯ ಮುಗಿದ್ದರೆ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

    ಚಿಕ್ಕಮಗಳೂರು: ಬಂದೂಕು ಹೊಂದಿರುವವರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಪರವಾನಗಿ ಸಮಯ ಮುಗಿದ್ದರೆ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
    ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಸಮಾರೋಪದಲ್ಲಿ ಮಾತನಾಡಿ, ಬಂದೂಕು ಪರವಾನಗಿ ಪಡೆದುಕೊಳ್ಳಲು ತರಬೇತಿ ಪಡೆಯಬೇಕು. ನಾಗರಿಕರ ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗಿದ್ದು ಇದು ದುರ್ಬಳಕೆ ಆಗಬಾರದು ಎಂದರು.
    ಶಿಬಿರದಲ್ಲಿ 410 ಮಂದಿ ತರಬೇತಿ ಪಡೆದಿದ್ದಾರೆ. ಅನಾಹುತಗಳಿಗೆ ಆಸ್ಪದ ನೀಡದಂತೆ ಗಮನಹರಿಸಬೇಕು. ಚುನಾವಣೆ ವೇಳೆ ಪರವಾನಗಿ ಇಲ್ಲದ ಸುಮಾರು 63 ಬಂದೂಕುಗಳನ್ನು ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇದು ಮರುಕಳುಹಿಸಬಾರದು ಎಂದು ಎಚ್ಚರಿಸಿದರು.
    ಪೊಲೀಸ್ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಪದ್ಧತಿ ಠಾಣೆಗಳಲ್ಲಿ ಅಳವಡಿಸಲಾಗಿದೆ. ನಾಗರಿಕರು ಪೊಲೀಸ್ ಇಲಾಖೆಯ ಕುರಿತು ಅಭಿಪ್ರಾಯಗಳನ್ನು ತಿಳಿಸಬಹುದು. ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು ಎಂದರು.
    ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್, ಪೊಲೀಸ್ ಇನ್ಸ್‌ಪೆಕ್ಟರ್ ಸಹದೇವ್, ಶಿವಪ್ರಕಾಶ್ ಆರ್.ನಾಯಕ್, ತರಬೇತುದಾರರಾದ ಸತೀಶ್, ವಿಷ್ಣುಕುಮಾರ್, ಪ್ರಸನ್ನಕುಮಾರ್, ದುರ್ಗಪ್ಪ, ಲೋಹಿತ್, ಪತ್ರಕರ್ತ ಜಿ.ಎಂ.ರಾಜಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts