ಅಥಣಿ ಗ್ರಾಮೀಣ: ಹಳ್ಳಿಯ ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿ ಎಂದು ಸರ್ಕಾರ ಓದುವ ಬೆಳಕು ಕಾರ್ಯಕ್ರಮ ಪ್ರಾರಂಭಿಸಿದೆ ಎಂದು ಗ್ರಾಪಂ ಅಭಿವದ್ಧಿ ಅಧಿಕಾರಿ ಬಸವರಾಜ ಬಳೋಜಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಗ್ರಾಪಂ ಗ್ರಂಥಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಗವಿಕಲರ ಸಮನ್ವಯ ಗ್ರಾಮಸಭೆ ಹಾಗೂ ಓದುವ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದರು.
ಓದುವ ಬೆಳಕು ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು ಉಪಯುಕ್ತ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದರು. ಉಪನ್ಯಾಸಕ ಪಿ.ಎಲ್.ಪೂಜಾರಿ, ಉಪನ್ಯಾಸಕ ಸಾಗರ ಕಟಗೇರಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಗುರುಪಾದ ಸವದಿ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಪಾಲಕ ಮಲ್ಲಯ್ಯ ಮಠಪತಿ, ಲಕ್ಕಪ್ಪ ಘಟನಟ್ಟಿ, ಮುರಿಗೆಪ್ಪ ಸವದಿ, ಗುರುಶಾಂತ ಕರಡಿಮಠ, ಚನ್ನಪ್ಪ ಸಾವಡಕರ, ಅಶೋಕ ಮರೆಗುದ್ದಿ, ಗಂಗಪ್ಪ ಗಸ್ತಿ, ಮಹಾಂತಯ್ಯ ಮಠಪತಿ ಇತರರಿದ್ದರು.