ಎಂ.ಕೆ.ಹುಬ್ಬಳ್ಳಿ: ಶಿಕ್ಷಕರು ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ಕುವೆಂಪು ವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಮುರುಗಯ್ಯ ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ವಿನೋದ ಪಾಟೀಲ, ಚೇರ್ಮನ್ ರಾಜಕುಮಾರ ಗಾಣಿಗೇರ, ಮುಖ್ಯೋಪಾಧ್ಯಾಯ ಮೃತ್ಯುಂಜಯ ಕಲ್ಮಠ, ಶ್ರೀಶೈಲ ಗಣಾಚಾರಿ, ಎಂ.ಎನ್.ಗುಗ್ಗರಿ, ಯಲ್ಲಪ್ಪ ಸಂಪಗಾರ, ಎಸ್‌ಡಿಎಂಸಿ ಅಧ್ಯಕ್ಷ ಭದ್ರನಾಥ ಪೂಜಾರ, ಬಸವರಾಜ ಕೊಡ್ಲಿ, ಮಡಿವಾಳಪ್ಪ ಪಟ್ಟಣಶೆಟ್ಟಿ, ಮೆಹಬೂಬ್‌ಸುಬಾನಿ ಜಾಮಿಂದಾರ ಇತರರು ಇದ್ದರು. ಪ್ರಿಯಾಂಕಾ ಕಲ್ಮಠ ನಿರೂಪಿಸಿದರು. ರವಿ ಕಾರಲಕಟ್ಟಿ ಸ್ವಾಗತಿಸಿದರು. ಶ್ರೀದೇವಿ ಹುಬ್ಳೀಕರ್ ವಂದಿಸಿದರು.