More

    ವಿಕಲಚೇತನರು ಸೌಲಭ್ಯಗಳ ಸದುಪಯೋಗ ಪಡೆಯಿರಿ

    ಅಳವಂಡಿ: ಸರ್ಕಾರ ವಿಕಲಚೇತನರಿಗೆ ನೀಡುವ ಸೌಲಭ್ಯಗಳ ಜತೆಗೆ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಉತ್ತಮ ಜೀವನ ನಡೆಸಬೇಕು ಎಂದು ಪಿಡಿಓ ಪ್ರಕಾಶ ಸಜ್ಜನ ತಿಳಿಸಿದರು.

    ಇದನ್ನೂ ಓದಿ: ವಿಮೆ ಸೌಲಭ್ಯ ಸದುಪಯೋಗವಾಗಲಿ

    ಸಮೀಪದ ಹಿರೇಸಿಂದೋಗಿ ಗ್ರಾಪಂನಲ್ಲಿ ಜಿಲ್ಲಾಡಳಿತ, ಜಿ.ಪಂ, ತಾ.ಪಂ.ಕೊಪ್ಪಳ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯಲ್ಲಿ ಸೋಮವಾರ ಮಾತನಾಡಿದರು.

    ತಾಲೂಕ ಸಂಪನ್ಮೂಲ ವ್ಯಕ್ತಿ ವೀರೇಶ ಹಾಲಗುಂದಿ ಮಾತನಾಡಿ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ 2016 ವಿಕಲಚೇತನರ ಹಕ್ಕುಗಳ ಕಾಯ್ದೆ ಜಾರಿಗೊಳಿಸಿದೆ.

    21 ರೀತಿಯ ವಿಕಲಚೇತನರನ್ನು ಗುರುತಿಸಿ ಹಲವಾರು ಯೋಜನೆಗಳನ್ನು ರೂಪಿಸಿ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಕಾರ್ಯಕರ್ತರ ಮನೆ ಬಾಗಿಲಿಗೆ ಸೇವೆ ಒದಗಿಸುತ್ತಿದೆ. ಹಾಗೂ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿ ಸಮಾನತೆ ಜೀವನ ನಡೆಸಲು ಸಹಾಯಕವಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.

    ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು ಉತ್ತಮ ಜೀವನ ನಡೆಸಿ

    ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಡಂಬ್ರಳ್ಳಿ, ಉಪಾಧ್ಯಕ್ಷೆ ನಿರ್ಮಲವ್ವ ಮಾಲಿಪಾಟೀಲ, ಕಾರ್ಯದರ್ಶಿ ಮಹೇಶ್ವರಯ್ಯ, ಸಮುದಾಯ ಆರೋಗ್ಯ ಅಧಿಕಾರಿ ಶಿವರಾಜ, ಕೆಎಚ್‌ಪಿಟಿಯ ಕ್ಷೇತ್ರ ಸಂಯೋಜಕಿ ಸುಷ್ಮಾ ಸಂಗರಡ್ಡಿ,

    ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಗಿರಿಜಮ್ಮ, ಸರೋಜಮ್ಮ, ವಿದ್ಯಾಶ್ರೀ, ಶಿವಮ್ಮ, ಅಂಜನಮ್ಮ, ಶೇಖಮ್ಮ, ಸಾವಿತ್ರಿ, ಶಾರದಾ, ಆಶಾಗಳಾದ ಮಂಜುಳಾ, ಹುಲಿಗೆಮ್ಮ, ಅಂಬಿಕಾ ಶಿಕ್ಷಕರಾದ ಪರಶುರಾಮ, ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts