More

    ಜಗತ್ತಿನ ಅತಿದೊಡ್ಡ ಕೋವಿಡ್ 19 ಆರೈಕೆ ಕೇಂದ್ರ ಲೋಕಾರ್ಪಣೆ

    ನವದೆಹಲಿ: ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೆಂದ್ರವೆಂದು ಹೆಸರಾದ 10 ಸಾವಿರ ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಇಲ್ಲಿನ ರಾಧಾ ಸೋಮಿ ಸತ್ಸಂಗ್ ಬಿಯಾಸ್‌ನಲ್ಲಿ ಉದ್ಘಾಟಿಸಿದರು.
    ಸೌಮ್ಯ ಮತ್ತು ಲಕ್ಷಣರಹಿತ ಕರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಛತ್ತಾಪುರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ಇದನ್ನೂ ಓದಿ: ಪೆಟ್ಟು ತಿಂದರೂ ಸುಮ್ಮನಾಗದ ಚೀನಾ, ಉತ್ತರಾಖಂಡ, ಹಿಮಾಚಲಕ್ಕೂ ವ್ಯಾಪಿಸಿದ ಡ್ರ್ಯಾಗನ್ ಕಬಂಧಬಾಹು

    ರೋಗಲಕ್ಷಣವಿಲ್ಲದ, ಆದರೆ ಮನೆಯಲ್ಲಿ ಐಸೋಲೇಶನ್ ಸೌಲಭ್ಯ ಸಾಧ್ಯವಾಗದವರಿಗೆ ಇದು ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ – ಅಂದಾಜು 20 ಫುಟ್ಬಾಲ್ ಮೈದಾನಗಳ ಗಾತ್ರ – ಮತ್ತು 200 ಆವರಣಗಳನ್ನು ಹೊಂದಿದ್ದು, ತಲಾ ಒಂದೊಂದು ಆವರಣದಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ.  ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಎಂದು ಇದರ ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ:  ಕೋವಿಡ್​ ಎಫೆಕ್ಟ್​: ಬರ್ತ್​ ಡೇ ಪಾರ್ಟಿ ನೀಡಿದವನು ಆಸ್ಪತ್ರೆಗೆ; ಪಾಲ್ಗೊಂಡವನು ಮಸಣಕ್ಕೆ

    ದೆಹಲಿ ಸರ್ಕಾರವು ಆಡಳಿತಾತ್ಮಕ ಬೆಂಬಲವನ್ನು ನೀಡಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಕೇಂದ್ರವನ್ನು ನಿರ್ವಹಿಸುವ ನೋಡಲ್ ಏಜೆನ್ಸಿಯಾಗಲಿದೆ. ರಾಧಾ ಸಾಮಿ ಬಿಯಾಸ್​​ನ ಧಾರ್ಮಿಕ ಪಂಥದ ಸ್ವಯಂಸೇವಕರು ಕೇಂದ್ರವನ್ನು ನಡೆಸಲು ಸಹಾಯ ಮಾಡುತ್ತಾರೆ.

    ಪಾದಚಾರಿ ಮೇಲೆ ಗಾಡಿ ಹರಿದು ಸಾವು: ಬ್ಯಾಟ್ಸ್‌ಮನ್‌ ಕುಸಲ್‌ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts