More

    ಕಾಂಗ್ರೆಸ್‌ನಿ೦ದ ಪತ್ರ ಚಳವಳಿ, ಜನಜಾಗೃತಿ

    ಧಾರವಾಡ: ಕೇಂದ್ರದ ಪ್ರಭಾವಿ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರಿಗೆ ಈ ಬಾರಿ ಸೋಲಿನ ಹತಾಶೆಯಲ್ಲಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಪೊಲೀಸ್ ಅಽಕಾರಿಗೆ ಮನಬಂದ೦ತೆ ನಿಂದಿಸಿ ಅವಮಾನಿಸಿದ್ದಾರೆ. ಅವರು ಕ್ಷಮೆ ಯಾಚಿಸದಿದ್ದರೆ ಕಾಂಗ್ರೆಸ್‌ನಿ೦ದ ಪತ್ರ ಚಳವಳಿಯ ಮೂಲಕ ಪ್ರಧಾನಿ ಮೋದಿಯವರಿಗೆ ದೂರು ನೀಡಲಾಗುವುದು ಎಂದು ಧಾರವಾಡ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಬ್ಬಗಳ ಸಂದರ್ಭದಲ್ಲಿ ಪೊಲೀಸ್ ಅಽಕಾರಿಗಳು ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ಸಚಿವ ಜೋಶಿಯವರು ಇಲ್ಲಿನ ಶಹರ ಠಾಣಾಽಕಾರಿಯನ್ನು ತಮ್ಮ ಮನೆಯಲ್ಲಿ ರೌಡಿಶೀಟರ್‌ಗಳ ಎದುರು ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿರುವುದು ಅವರ ಯೋಗ್ಯತೆಗೆ ತಕ್ಕುದಲ್ಲ ಎಂದರು.
    ಕಾನೂನು ಮತ್ತು ಶಾಂತಿ ಪಾಲನೆ ಮಾಡುವ ಸರ್ಕಾರಿ ಸೇವೆಯಲ್ಲಿರುವ ಪೊಲೀಸ್ ಅಽಕಾರಿಯನ್ನು ಅವಮಾನಿಸುವುದು ರಾಜಕಾರಣಿಗೆ ತಕ್ಕುದಲ್ಲ. ಅಽಕಾರಿ ತಪ್ಪು ಮಾಡಿದ್ದರೆ ಕಾನೂನಿನಡಿ ಮಾತನಾಡಿ ಬುದ್ಧಿ ಹೇಳಬಹುದಿತ್ತು. ಆದರೆ, ಸಚಿವ ಜೋಶಿ ಅವರು ಲೋಕಸಭೆ ಹತ್ತಿರ ಬರುತ್ತಿದ್ದಂತೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರು ಇಂಥ ಗಿಮಿಕ್‌ಗಳನ್ನು ಬಿಡಬೇಕು. ಜಿಲ್ಲೆಯಲ್ಲಿ ಬರಗಾಲವಿದ್ದು, ಸಚಿವರು ಕೇಂದ್ರದಿ೦ದ ಹೆಚ್ಚಿನ ಬರ ಪರಿಹಾರಧನ ತರಲಿ. ಅವರು ೧೫ ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಪತ್ರ ಚಳವಳಿ ಮೂಲಕ ಪ್ರಧಾನಮಂತ್ರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ, ಕಾಂಗ್ರೆಸ್‌ನಿ೦ದ ಜನಜಾಗೃತಿ ಎಂದರು.
    ದೀಪಾವಳಿ ಮುನ್ನಾದಿನ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಜೂಜಾಟ ತಡೆಯಲು ಹೋದ ಪೊಲೀಸರ ಮೇಲೆ ನಡೆದ ಹಲ್ಲೆಗೂ ಸಚಿವ ಜೋಶಿಯವರ ವರ್ತನೆಯೇ ಪ್ರೇರಣೆಯಗಿದೆ. ಗ್ರಾಮೀಣ ಠಾಣೆಯ ಮೂವರು ಕರ್ತವ್ಯನಿರತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಬಹುತೇಕ ಆರೋಪಿಗಳು ಬಿಜೆಪಿಯವರು. ಆದ್ದರಿಂದ ಹಲ್ಲೆಕೋರರಿಗೆ ಜೋಶಿಯವರ ಪರೋಕ್ಷ ಬೆಂಬಲ ಇದ್ದಿರಬಹುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪರಮೇಶ್ವರ ಕಾಳೆ, ದೀಪಾ ಸಂತೋಷ ನೀರಲಕಟ್ಟಿ, ಚನಬಸಪ್ಪ ಮಟ್ಟಿ, ಮಡಿವಾಳಪ್ಪ ಉಳವಣ್ಣವರ, ಮಂಜುನಾಥ ಮಸೂತಿ, ನಿಂಗಪ್ಪ ಮೊರಬದ, ನವೀನ ಕದಂ, ಮೈಲಾರಗೌಡ ಪಾಟೀಲ, ಭೀಮಪ್ಪ ಕಾಸಾಯಿ, ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts