More

    ಶ್ರೀರಂಗಪಟ್ಟಣದಲ್ಲಿ ಅಗ್ನಿಶಾಮಕ ಸಪ್ತಾಹ

    ಶ್ರೀರಂಗಪಟ್ಟಣ: ಅಗ್ನಿ ಅವಘಡಗಳು ಉಂಟಾಗುವ ಪರಿಸ್ಥಿತಿ ತಪ್ಪಿಸಿ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಅಗ್ನಿಶಾಮಕ ದಳ ಸಿಬ್ಬಂದಿ ಜಾಗೃತಿ ಮೂಡಿಸಿದರು.

    ಪಟ್ಟಣದಲ್ಲಿ ಸೋಮವಾರ -2024 ಸಾಲಿನ ಅಗ್ನಿ ಶಾಮಕ ಸಪ್ತಾಹ ಪ್ರಯುಕ್ತ ಶ್ರೀರಂಗಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ 7 ದಿನಗಳ ಕಾಲ ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಪುರಸಭೆ ಕಾರ್ಯಾಲಯದ ಮುಂಭಾಗ ಪುರಜನರಿಗೆ ಈ ಸಂಬಂಧ ಹಲವು ಮಾಹಿತಿ ನೀಡಿದರು.

    ಬಳಿಕ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಎನ್.ಉಪ್ಪಾರ್ ಮಾತನಾಡಿ, 1944ರ ಏಪ್ರಿಲ್ 14 ರಂದು ಮುಂಬೈನ ಕರಾವಳಿಯಲ್ಲಿ ಸ್ಫೋಟಕಗಳನ್ನು ರವಾನಿಸುತ್ತಿದ್ದ ಬೃಹತ್ ಹಡಗಿನಲ್ಲಿ ಕಂಡುಬಂದ ಸಣ್ಣ ಅಗ್ನಿ ಸ್ಪರ್ಶವನ್ನು ನಿರ್ಲಕ್ಷಿಸಿದ ಕಾರಣ ಕೆಲಹೊತ್ತಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿತು. ಪರಿಣಾಮ ಸುಮಾರು 1500 ಜನರು ಹಾಗೂ 66 ಜನ ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ಹುತಾತ್ಮರಾದರು. ಈ ಹಿನ್ನಲೆ ಏ.14ರಂದು ಹುತಾತ್ಮರಿಗೆ ಗೌರವ ಸಮರ್ಪಿಸುವ ಜತೆಗೆ ಅಗ್ನಿಶಾಮಕ ಸಪ್ತಾಹ ದಿನವನ್ನು ಅಂದಿನಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಅಗ್ನಿ ಅವಘಡಗಳ ತಡೆಗೆ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ನಂತರ ತಾಲೂಕು ಕಚೇರಿ, ಅಂಬೇಡ್ಕರ್ ವೃತ್ತ, ಕಾವೇರಿ ಸ್ನಾನಘಟ್ಟದಂತಹ ಪ್ರಮುಖ ಸ್ಥಳಗಳಲ್ಲಿ ಜನಜಾಗೃತಿ ಮೂಡಿಸಲಾಯಿತು.

    ಸಹಾಯಕ ಠಾಣಾಧಿಕಾರಿ ಕೆ.ಪಿ.ಪರಮೇಶ್, ಪ್ರಮುಖ ಅಗ್ನಿಶಾಮಕ ಕೆ.ಎಂ. ಅನಂತ, ಅಗ್ನಿಶಾಮಕ ಕಾಂತರಾಜು, ನಂದನ್ ಹಾಗೂ ಅಗ್ನಿಶಾಮಕ ವಾಹನ ಚಾಲಕ ಶ್ರೀಶೈಲ ಕುರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts