More

    ಗಾಂಧೀಜಿ ಕನಸು ನನಸಾಗಿಸಲು ರೂಪಿಸಿದೆ ಯೋಜನೆ

    ಯಲಬುರ್ಗಾ: ಎನ್‌ಎಸ್‌ಎಸ್ ಶಿಬಿರ ಜನಜಾಗೃತಿ ಮತ್ತು ಹೊಸ ಬದಲಾವಣೆಗೆ ಪೂರಕವಾಗಿದೆ ಎಂದು ಕೊಪ್ಪಳ ವಿವಿ ಪ್ರಭಾರ ಕುಲಸಚಿವ ಕೆ.ವಿ.ಪ್ರಸಾದ ಹೇಳಿದರು.
    ಪಟ್ಟಣದ ವಿಎಸ್‌ಕೆ ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಎನ್ನೆಸ್ಸೆಸ್ ಗಾಂಧೀಜಿ ಅವರ ಕನಸಿನ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ರೂಪಿಸಿದ ಯೋಜನೆಯಾಗಿದೆ. ಹಳ್ಳಿಗಳಲ್ಲಿ ಮೂಲ ಸೌಲಭ್ಯ, ಸ್ವಚ್ಛತೆ, ಆರೋಗ್ಯ ಮತ್ತು ಶಿಕ್ಷಣದ ಅರಿವು ಮೂಡಿಸುವ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರಲ್ಲಿ ನಾಯಕತ್ವ ಗುಣ ಬೆಳೆಯಲು ಅನುಕೂಲವಾಗಲಿದೆ ಎಂದರು.

    ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಐ.ಛಲವಾದಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ದೇಶದಲ್ಲಿನ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.

    ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್ ಘಟ್ಟ ಮಹತ್ವದ್ದಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪರಿಸರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದಾಗ ಗಿಡಮರ ಪೋಷಿಸುವ ಮನೋಭಾವನೆ ಬೆಳೆಯುತ್ತದೆ ಎಂದರು. ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಜಗದೀಶ ವೈ.ಕೆ. ಮಾತನಾಡಿದರು.

    ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಪ್ರಕಾಶ ಯಳವಟ್ಟಿ, ಯೋಜನಾಧಿಕಾರಿ ಬಸವರಾಜ ಈಳಿಗನೂರು, ಪ್ರಾಧ್ಯಾಪಕರಾದ ಸಾಧು ಸೂರ್ಯಕಾಂತ, ಅಶ್ವಿನಕುಮಾರ, ಸರಸ್ವತಿ ಹಾಗೂ ಶಿಬಿರಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts