More

    ಭರತ ಮುನಿಯಿಂದ ಸ್ಥಾಪಿತವಾದ ಭರತನಾಟ್ಯ ಕಲೆ ಉಳಿಸಿ, ಬೆಳೆಸಲು ಮುಂದಾಗೋಣ

    ಭಟ್ಕಳ: ಭರತ ಮುನಿಯಿಂದ ಸ್ಥಾಪಿತವಾದ ಭರತನಾಟ್ಯ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಭಟ್ಕಳ ತಾಲೂಕಿನ ಶಿರಾಲಿಯ ಸಮಾಜ ಸೇವಕ ಡಿ.ಜೆ. ಕಾಮತ ಹೇಳಿದರು.

    ಭಾನುವಾರ ಶಿರಾಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ನರ್ತಕಿ ಟ್ರಸ್ಟ್ ಆಶ್ರಯದಲ್ಲಿ ಆರಂಭಗೊಂಡ ಭರತನಾಟ್ಯ ತರಗತಿ ಉದ್ಘಾಟಿಸಿ ಮಾತನಾಡಿದರು.

    ಈ ನಾಟ್ಯದಲ್ಲಿ ಯೋಗವಿದೆ, ಮನೋರಂಜನೆ ಇದೆ. ಆರೋಗ್ಯ ಕಾಪಾಡುವಲ್ಲಿಯೂ ಇದು ಸಹಕಾರಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೃತ್ಯ ಗುರು ವಿಶ್ವೇಶರ ಹೆಗಡೆ, ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮಾತನಾಡಿದರು.

    ಸಿದ್ದಾರ್ಥ ಕಾಲೇಜಿನ ಪ್ರಾಂಶುಪಾಲೆ ಅರ್ಚನಾ ಯು, ಸೇಂಟ್ ಥಾಮಸ್ ಅಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಸ್ಯಾಮುವಲ್ ವರ್ಗಿಸ್, ಗ್ರಾ.ಪಂ ಸದಸ್ಯೆ ಸುನೀತಾ ಹೇರೂರಕರ್ ಇದ್ದರು. ಸುನೀಲ ಕಣ್ಣನ್, ಶಾಂಭವಿ ಆಚಾರ್ಯ, ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts