More

    ಬಾವುಟ ಹಾರಿಸಿ ದೇಶಪ್ರೇಮ ಮೆರೆಯೋಣ

    ರಾಣೆಬೆನ್ನೂರ: ಈ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವು ನಿಮಿತ್ತ ಪ್ರತಿಯೊಬ್ಬರೂ ಮನೆ ಮನೆಯ ಮೇಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ ಲಿಂಗಾಯತ ಪಂಚಮಸಾಲಿ ಸಮಾಜದ ಗ್ರಾಮೀಣ ಹಾಗೂ ನಗರ ಘಟಕದ ವತಿಯಿಂದ ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಮನೆ ಮನೆಯ ಮೇಲೂ ತ್ರಿವರ್ಣ ಧ್ವಜ ಅಭಿಯಾನ ಹಾಗೂ ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವಾತಂತ್ರ್ಯ ದೊರೆತು 75 ವರ್ಷ ಪೂರೈಸಿದ ಹಿನ್ನ್ನೆಲೆಯಲ್ಲಿ ಈ ಬಾರಿ ಅದ್ಭುತ ಹಾಗೂ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಹಲವಾರು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಜನರು ಅವುಗಳನ್ನು ಯಶಸ್ವಿಗೊಳಿಸುವ ಮೂಲಕ ದೇಶದ ಪ್ರೇಮ ಮೆರೆಯಬೇಕು ಎಂದರು.

    ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದೇಶದ ಅನೇಕ ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಆದ್ದರಿಂದ ಎಲ್ಲರೂ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನ ಆಚರಣೆಗೆ ಮುಂದಾಗಬೇಕು ಎಂದರು.

    ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಸಿದ್ದು ಚಿಕ್ಕಬಿದರಿ, ನಗರ ಘಟಕದ ಅಧ್ಯಕ್ಷ ಎಸ್.ಬಿ. ಗುರಿಕಾರ, ಪ್ರಮುಖರಾದ ಅಣ್ಣಪ್ಪ ಚಿಕ್ಕಬಿದರಿ, ರಾಜಣ್ಣ ಪಾಟೀಲ, ವಿರೂಪಾಕ್ಷಪ್ಪ ಹರಪನಹಳ್ಳಿ, ಹಾಲಪ್ಪ ಅಲಗಿಲ್ವಾಡ, ಗುರುಲಿಂಗಪ್ಪ ಮಲ್ಲಾಪುರ, ವಿನಾಯಕ ಮಲ್ಲಾಪುರ, ಸುರೇಶ ನಿಟ್ಟೂರ, ಸುಲೋಚನಾ, ಜಂಬಗಿ, ಕಲ್ಯಾಣಕುಮಾರ ಶೆಟ್ಟರ, ವಿಜಯಕುಮಾರ ಚಿನ್ನಿಕಟ್ಟಿ, ಹನುಮಂತಪ್ಪ ತಳವಾರ, ವಿರೂಪಾಕ್ಷಪ್ಪ ಸಾವಕ್ಳವರ, ಸಿದ್ದನಗೌಡ ಪಾಟೀಲ, ಕೆಂಚನಗೌಡ ಪಾಟೀಲ, ಬಸವರಾಜ ಅಲಿಗವಾಡ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts