More

    ಶಿಕ್ಷಕರು ಪೂರ್ವ ತಯಾರಿಮಾಡಿಕೊಳ್ಳಲಿ

    ಕೊಳ್ಳೇಗಾಲ: ಮಕ್ಕಳಿಗೆ ಪಾಠ ಮಾಡುವ ಮುನ್ನ ಪೂರ್ವ ತಯಾರಿಯನ್ನು ಶಿಕ್ಷಕರು ಮಾಡಿಕೊಳ್ಳಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.

    ಪಟ್ಟಣದ ಲಯನ್ಸ್ ಶಾಲೆಯ ಸಿಲ್ವರ್ ಜ್ಯೂಬಿಲಿ ಸಭಾಂಗಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ವಿಷಯ ಶಿಕ್ಷಕರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಪ್ರೇರಣಾ ತರಬೇತಿ ಕಾರ್ಯಾಗಾರ ಹಾಗೂ ಪರಿಶ್ರಮ ಮಾದರಿ ಪ್ರಶ್ನೆ ಪತ್ರಿಕೆಗಳ ಕೈಪಿಡಿ ಸಮಾರಂಭದಲ್ಲಿ ಮಾತನಾಡಿದರು.

    ಪಾಠಕ್ಕೂ ಮೊದಲು ಪೂರಕ ತಯಾರಿ ಮಾಡಿಕೊಳ್ಳದಿದ್ದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಚಾಮರಾಜನಗರ ಜಿಲ್ಲೆ ಶೈಕ್ಷಣಿಕ ಪ್ರಗತಿಯತ್ತ ಸಾಗುತ್ತಿದೆ. ಅಂಬೇಡ್ಕರ್ ಅವರ ಮಾತಿನಂತೆ ಶಿಕ್ಷಣವೆ ಮೂಲ ಅಸ್ತ್ರವಾಗಿದೆ. ಮಕ್ಕಳಿಗೆ 15 ರಿಂದ 20ರವರೆಗಿನ ವಯಸ್ಸು ಶ್ರೇಷ್ಠವಾದದ್ದಾಗಿದ್ದು, ವಿದ್ಯಾರ್ಥಿಗಳು ಸದ್ಭಳಕೆಮಾಡಿಕೊಳ್ಳಬೇಕು ಎಂದರು.

    ಡಯಟ್ ಅಧಿಕಾರಿ ಕಾಶಿನಾಥ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಶಿಕ್ಷಣ ಜೀವನದ ಅಡಿಪಾಯವಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ, ಒಳ್ಳೆಯ ಅವಕಾಶಗಳು ದೊರಕುತ್ತವೆ. ನಿತ್ಯ ಓದಬೇಕು. ಓದಿನ ನಂತರ ಪುನರ್ಮನನ ಮಾಡಿಕೊಳ್ಳಬೇಕು ಎಂದರು. ಟಿವಿ ಹಾಗೂ ಮೊಬೈಲ್ ಬಳಕೆಯಿಂದ ದೂರ ಉಳಿಯುವಂತೆ ಸಲಹೆ ನೀಡಿದರು.

    ಸಂಪನ್ಮೂಲ ವ್ಯಕ್ತಿ ಶಂಕರ್ ದೇವನೂರು ಪರಿಶ್ರಮ ಮಾದರಿ ಪ್ರಶ್ನೆ ಪತ್ರಿಕೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.

    ಬಿಇಒ ಮಂಜುಳಾ, ಬಿಆರ್‌ಸಿ ಮಹದೇವ ಕುಮಾರ್, ಲಯನ್ಸ್ ಶಾಲೆಯ ಕಾರ್ಯದರ್ಶಿ ಜಿಎಸ್‌ಎಂ ಪ್ರಸಾದ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಕ್ಬರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts