More

    ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲಿ

    ಹಂಸಭಾವಿ: ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಮನೋಭಾವ ಯಶಸ್ಸಿಗೆ ಕಾರಣವಾಗುತ್ತದೆ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಮಾರ್ಗದರ್ಶಕಿ ಮಂಜುಳಾ ಜೆ. ವೈ., ಹೇಳಿದರು.

    ಸ್ಥಳೀಯ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸ್ವ-ಉದ್ಯೋಗಾವಕಾಶಗಳ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿರಬೇಕು. ಪ್ರಸ್ತುತ ಸಂಪನ್ಮೂಲಗಳ ಕೊರತೆಯಿದ್ದು, ಸ್ಪರ್ಧೆ ಅಧಿಕವಾಗಿದೆ. ನಾನಾ ಕಾರಣಗಳಿಂದಾಗಿ ಉದ್ಯೋಗಾವಕಾಶಗಳು ಯಥೇಚ್ಛವಾಗಿ ಲಭ್ಯವಾಗುತ್ತಿಲ್ಲ ಎಂದರು.

    ಬ್ಯಾಂಕ್ ಆಫ್ ಬರೋಡಾವು 18 ವರ್ಷ ಮೇಲ್ಪಟ್ಟ ಯುವಕ-ಯುವತಿಯರಿಗೆ 4 ಪ್ರಕಾರದ ತರಬೇತಿ ನೀಡುತ್ತದೆ. ಕೃಷಿ, ಸೇವಾ, ಉತ್ಪಾದನಾ ಚಟುವಟಿಕೆ ಹಾಗೂ ಉದ್ಯಮಶೀಲತಾ ತರಬೇತಿ ಪಡೆದವರಿಗೆ ಸಹಾಯಧನ ನೀಡಲಾಗುವುದು. 6 ರಿಂದ 45 ದಿನಗಳವರೆಗಿನ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಲಾಗುವುದು. ತರಬೇತಿಯಲ್ಲಿ ಊಟ, ವಸತಿ ಉಚಿತವಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ತಿಪ್ಪೇಶ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಂಘದ ಸಂಚಾಲಕ ಡಾ. ರವಿ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ ಎಂ.ಜಿ. ಬಂಡಿವಡ್ಡರ ಇತರರು ಉಪಸ್ಥಿತರಿದ್ದರು. ಹುಸೇನಸಾಬ್ ಕಳಗೊಂಡ ಸ್ವಾಗತಿಸಿದರು. ಪಲ್ಲವಿ ಬೋಳಕಟ್ಟಿ ಅತಿಥಿಗಳನ್ನು ಪರಿಚಯಿಸಿದರು.

    ಡಾ. ಹಮ್ಮಿಣಿ ಬಸವ್ವ ನಿರೂಪಿಸಿದರು. ಡಾ. ಮಲ್ಲಿಕಾರ್ಜುನ ಕುಂಬಾರ್ ವಂದಿಸಿದರು. ಕುಮಾರಿ ಅಂಜಲಿ ಹುಗಲಾರ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. 300 ವಿದ್ಯಾರ್ಥಿಗಳು ಸ್ವ-ಉದ್ಯೋಗ ಅರಿವು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts