More

    ಮನುಷ್ಯನ ಜ್ಞಾನ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಲಿ

    ಬೈಲಹೊಂಗಲ: ಮನುಷ್ಯ ತನ್ನ ಜ್ಞಾನವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಬೇಕು ಎಂದು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಹೇಳಿದರು.

    ಪಟ್ಟಣದ ಜಗದ್ಗುರು ಶ್ರೀ ಮಡಿವಾಳೇಶ್ವರ ಮಠದ 33ನೇ ಜಾತ್ರಾ ಮಹೋತ್ಸವ, ಶಿವಶರಣೆ ತಂಗೆಮ್ಮ ತಾಯಿಯವರ 78ನೇ ಜಯಂತ್ಯುತ್ಸವ ಅಂಗವಾಗಿ ಜ.7ರ ವರೆಗೆ ಜರುಗಲಿರುವ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಮನಸು ಹತೋಟಿಯಲ್ಲಿಟ್ಟುಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

    ಅರಳಿಕಟ್ಟಿ ತೋಂಟದಾರ್ಯ ಮಠದ ಶಿವಮೂರ್ತಿ ಶ್ರೀ ಮಾತನಾಡಿ, ಮಹಾತ್ಮರ ವಾಣಿ ಆಲಿಸಬೇಕು ಎಂದರು.
    ಸಿದ್ಧರಾಮ ಶಾಸಿಗಳು, ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯ ಅತೀ ಆಸೆಗೆ ಬಲಿಯಾಗಿ ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ ಎಂದರು.

    ಶ್ರೀಮಠದ ಮಡಿವಾಳೇಶ್ವರ ಶ್ರೀ, ಗಂಗಪ್ಪ ತುರಮರಿ, ಸಣ್ಣಬಸಪ್ಪ ಕುಡಸೋಮಣ್ಣವರ, ಈಶ್ವರ ಕೊಪ್ಪದ, ಮಹಾಂತೇಶ ಅಕ್ಕಿ, ರುದ್ರಪ್ಪ ತುರಮರಿ, ಶಿವಲಿಂಗಯ್ಯ ಏಣಗಿಮಠ, ರವಿ ಲಕ್ಕನ್ನವರ, ಈರಪ್ಪ ಹಣಸಿ, ಬಸವರಾಜ ಕಲಾದಗಿ, ಉಮೇಶ ಬೋರಕನವರ, ಶಿವಸಪ್ಪ ಕಡಕೋಳ, ಗುರುಪಾದಪ್ಪ ಅಂಗಡಿ, ಮಹಾಂತೇಶ ಹಣಸಿ, ಗಿರೀಶ ಕಡಕೋಳ, ಗಿರೀಶ ಪಾಟೀಲ ಇದ್ದರು. ರುದ್ರಪ್ಪ ಹೂಗಾರ ಸಂಗೀತ, ಮಲ್ಲಿಕಾರ್ಜುನ ಚಿಕ್ಕಮಠ ತಬಲಾ ಸೇವೆ ನೀಡಿದರು. ಮಹಾಪ್ರಸಾದ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts