More

    ಇತರೆ ಶಾಲೆಗಳಿಗೆ ಕೆಪಿಎಸ್ ಶಾಲೆ ಮಾದರಿಯಾಗಲಿ

    ಎನ್.ಆರ್.ಪುರ: ಸರ್ಕಾರ ತಾಲೂಕಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ಘೋಷಿಸಿ ಸಾಕಷ್ಟು ಅನುದಾನ ನೀಡಲು ನಿರ್ಧರಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
    ಪಟ್ಟಣದ ಕೆಪಿಎಸ್‌ನ ಪ್ರಾಥಮಿಕ ಶಾಲಾ ವಿಭಾಗಕ್ಕೆ ತೆರಳಿ ನೂತನವಾಗಿ ಮಂಜೂರಾಗಿರುವ ಐದು ಕಟ್ಟಡಗಳ ಸ್ಥಳ ಪರಿಶೀಲನೆ ನಡೆಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿ, ಎಲ್‌ಕೆಜಿ ಯಿಂದ 12ನೇ ತರಗತಿ ಒಳಗೊಂಡ ಕೆಪಿಎಸ್ ಶಾಲೆಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿ ಅಡಗಿದೆ ಎಂದರು. ಸರ್ಕಾರದಿಂದ ದೊರೆಯುವ ಅನುದಾನವನ್ನು ನಾವು ಶಕ್ತಿ ಮೀರಿ ಈ ಶಾಲೆಗೆ ಕೊಡಲು ಪ್ರಯತ್ನಿಸಲಾಗುವುದು. ಅದಕ್ಕೆ ಪ್ರತಿಯಾಗಿ ಶಿಕ್ಷಕರು ಕೆಪಿಎಸ್ ಶಾಲೆಗಳಿಗೆ ವಿದ್ಯಾರ್ಥಿಗಳು ಅಧಿಕವಾಗಿ ಬರುವ ಹಾಗೆ ಮಾಡಬೇಕಿದೆ. ನುರಿತ ಶಿಕ್ಷಕರನ್ನು ಒಳಗೊಂಡ ಈ ಕೆಪಿಎಸ್ ಶಾಲೆಯು ಮುಂದಿನ ದಿನಗಳಲ್ಲಿ ಯಾವ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದ ರೀತಿ ಲಿತಾಂಶ ತಂದು ಕೊಡಬೇಕು ಎಂದು ತಿಳಿಸಿದರು.
    ಎಸ್‌ಡಿಎಂಸಿ ಕಾರ್ಯಧ್ಯಕ್ಷ ಲಕ್ಷ್ಮಣ ಶೆಟ್ಟಿ, ಉಪಾಧ್ಯಕ್ಷರಾದ ಪುರುಷೋತ್ತಮ್, ಸದಸ್ಯರಾದ ಸಲೀಮ್,ಉದಯ, ಮೇಘನಾ, ವಸೀಂ, ಪ್ರಾಚಾರ್ಯೆ ಸರಸ್ವತಿ, ಉಪ ಪ್ರಾಚಾರ್ಯೆ ರುದ್ರಪ್ಪ, ಮುಖ್ಯಶಿಕ್ಷಕಿ ಯಶೋಧ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts