More

    ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!

    ಮಾಗಡಿ: ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಚಿರತೆ ಹೊತ್ತೊಯ್ದು ತಿಂದಿರುವ ಘಟನೆ ತಾಲೂಕಿನ ಕೊತ್ತಗಾನಹಳ್ಳಿಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

    ಗಂಗಮ್ಮ (68) ಮೃತಪಟ್ಟವರು. ಮನೆಯ ಒಳಗೆ ಸೆಕೆ ಎಂದು ಎಂದಿನಂತೆ ಶುಕ್ರವಾರ ರಾತ್ರಿ ಮನೆಯ ಪಡಸಾಲೆಯಲ್ಲಿ ಮಲಗಿದ್ದರು. ಮನೆಯ ಹಿಂಭಾಗದ 100 ಮೀಟರ್ ದೂರದ ಪೊದೆಯೊಳಗೆ ಶನಿವಾರ ಬೆಳಗ್ಗೆ ವೃದ್ಧೆಯ ತಲೆ ಒಂದು ಕಡೆ, ದೇಹ ಮತ್ತೊಂದು ಕಡೆ ಬಿದ್ದಿದ್ದು ಕಂಡುಬಂದಿದೆ.

    ಇದನ್ನೂ ಓದಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    ಸೆಕೆ ಅಂತ ಮನೆಯ ಪಡಸಾಲೆಯಲ್ಲಿ ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ತಿಂದ ಚಿರತೆ!
    ಮಾಗಡಿ ತಾಲೂಕಿನಲ್ಲಿ ಚಿರತೆ ಹಾವಳಿಗೆ ಜನರ ಪ್ರಾಣಹಾನಿಯಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಕುಟುಂಬಸ್ಥರನ್ನು ಸಂತೈಸಿದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು 4 ಗಂಟೆಯಾದರೂ ಸ್ಥಳಕ್ಕೆ ಬರಲಿಲ್ಲ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು. ನಂತರ ವಲಯ ಅರಣ್ಯಾಧಿಕಾರಿ ಪುಷ್ಪಲತಾ ಭೇಟಿ ನೀಡಿದಾಗ ನೂರಾರು ರೈತರು ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

    ಕಳೆದ ಶುಕ್ರವಾರವಷ್ಟೆ ರಾತ್ರಿ ಕದರಯ್ಯನಪಾಳ್ಯದಲ್ಲಿ ಮೂರು ವರ್ಷದ ಹೇಮಂತ್ ಎಂಬ ಮಗುವನ್ನು ಚಿರತೆ ಮನೆಯಿಂದ ಹೊತ್ತೊಯ್ದು ಸಾಯಿಸಿತ್ತು. ಎರಡು ದಿನಗಳ ಹಿಂದೆ ಚಿರತೆಯೊಂದು ಬೋನಿಗೆ ಬಿದ್ದಿದ್ದರಿಂದ ಜನ ನಿಟ್ಟುಸಿರುಬಿಟ್ಟಿದ್ದರು. ಆದರೆ ಇಂದು ಮತ್ತೆ ಅಂಥದೇ ಘಟನೆ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.

    ಇದನ್ನೂ ಓದಿ ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!

    ಸುತ್ತಲಿನ ಮಲ್ಲೂರು, ಗೆಜ್ಜಗಲ್ಲುಪಾಳ್ಯ, ಹೊಸಹಳ್ಳಿ, ಬಂಟರಕುಪ್ಪೆ, ಗೇರುಪಾಳ್ಯ, ಬಸವನಪಾಳ್ಯ, ಜೋಗಿಪಾಳ್ಯ, ಬೊಡಗನಪಾಳ್ಯ ಮತ್ತಿತರ ಗ್ರಾಮಗಳ ಬಳಿಯ ಬೆಟ್ಟ, ಗುಟ್ಟಗಳ ಬಳಿ ಚಿರತೆಗಳು ಹಗಲು ವೇಳೆಯೇ ಕಾಣಿಸಿಕೊಳ್ಳುತ್ತಿವೆ. ಕರು, ಕುರಿಗಳನ್ನು ಸಾಯಿಸಿರುವುದೂ ಇದೆ. ಮೇಕೆ ಮೇಯಿಸಲು ತೆರಳಿದವರ ಮೇಲೆ ಚಿರತೆ ಎರಗುತ್ತಿದಂತೆ ರಸ್ತೆಯಲ್ಲಿ ಓಡಾಡುತ್ತಿದ್ದ ಬೈಕ್ ಶಬ್ದ ಕೇಳಿ ಓಡಿಹೋಗಿರುವ ಘಟನೆಗಳೂ ನಡೆದಿವೆ.

    ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತದೇಹವನ್ನು ಸ್ಥಳದಿಂದ ಮೇಲೆ ಎತ್ತುವುದಿಲ್ಲ ಎಂದು ನೂರಾರು ಮಂದಿ ಗ್ರಾಮಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಶಾಸಕರಾದ ಎ. ಮಂಜುನಾಥ್, ಡಾ. ಶ್ರೀನಿವಾಸ್, ಮಾಜಿ ಶಾಸಕ ಅಂಜನಮೂರ್ತಿ ಗ್ರಾಮಸ್ಥರ ಮನವೊಲಿಸಿದರು.

    ಇದನ್ನೂ ಓದಿ ನಗರ ನಕ್ಸಲರು ಮತ್ತು ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ದುರಂತ ಕಥೆ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts