More

    ಲಿಯೋನೆಲ್​ ಮೆಸ್ಸಿ ಹೊಸ ತಂಡದ ಬಗ್ಗೆ ಮೂಡಿದೆ ಕುತೂಹಲ

    ಬಾರ್ಸಿಲೋನಾ: 2000ದಲ್ಲಿ 13ನೇ ವಯಸ್ಸಿನಲ್ಲೇ ಜೂನಿಯರ್ ತಂಡದ ಮೂಲಕ ಬಾರ್ಸಿಲೋನಾ ಬಳಗವನ್ನು ಸೇರಿಕೊಂಡಿದ್ದ ಅರ್ಜೆಂಟೀನಾದ ಫುಟ್​ಬಾಲ್​ ತಾರೆ ಲಿಯೋನೆಲ್​ ಮೆಸ್ಸಿ, ವೃತ್ತಿಜೀವನದಲ್ಲಿ ಇದುವರೆಗೆ ಬೇರೆ ಯಾವ ಕ್ಲಬ್ ಜೆರ್ಸಿಯನ್ನೂ ಧರಿಸಿದ್ದಿಲ್ಲ. ಇದೀಗ ಅವರು ಆಡುವ ಹೊಸ ಕ್ಲಬ್ ಯಾವುದಾಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಮ್ಯಾಂಚೆಸ್ಟರ್ ಸಿಟಿ ತಂಡದ ಪರ ಆಡಲು ಮೆಸ್ಸಿ ಒಲವು ಹೊಂದಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಆಸ್ಟ್ರೇಲಿಯಾದ ಅಡಿಲೇಡ್ ಯುನೈಟೆಡ್ ಕ್ಲಬ್ ಕೂಡ ಮೆಸ್ಸಿಯನ್ನು ಸೆಳೆಯಲು ಆಸಕ್ತಿ ತೋರಿದೆ. ಫ್ರಾನ್ಸ್‌ನ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಕೂಡ ರೇಸ್‌ನಲ್ಲಿದೆ.

    ₹1,947 ಕೋಟಿಗೂ ಅಧಿಕ ವರ್ಗಾವಣೆ ಮೊತ್ತ!
    ಮೆಸ್ಸಿ ಅವರನ್ನು ದಾಖಲೆಯ 1,947 ಕೋಟಿ ರೂಪಾಯಿಗೂ (222 ದಶಲಕ್ಷ ಯುರೋ) ಅಧಿಕ ಮೊತ್ತಕ್ಕೆ ವರ್ಗಾವಣೆ ಮಾಡಲು ಬಯಸಿರುವುದಾಗಿ ಬಾರ್ಸಿಲೋನಾ ಕ್ಲಬ್ ತಿಳಿಸಿದೆ. ಈ ಮುನ್ನ ನೇಮರ್‌ರನ್ನು ಬಾರ್ಸಿಲೋನಾ ಇಷ್ಟೇ ಮೊತ್ತಕ್ಕೆ ಪಿಎಸ್‌ಜಿಗೆ ವರ್ಗಾವಣೆ ಮಾಡಿತ್ತು.

    ಇದನ್ನೂ ಓದಿ:  ಗಂಡನಿಗಾಗಿ ರಾಷ್ಟ್ರೀಯ ಬ್ಯಾಡ್ಮಿಂಟನ್​ ಶಿಬಿರದಿಂದ ಹೊರಗುಳಿದ ಸೈನಾ..!

    ಕರಾರು ಅಡಚಣೆ
    ಈ ನಡುವೆ ಮೆಸ್ಸಿ ಬಾರ್ಸಿಲೋನಾ ಕ್ಲಬ್ ತೊರೆಯಲು ಕರಾರು ಅಡಚಣೆ ಎದುರಾಗುವ ಸಾಧ್ಯತೆಯೂ ಇದೆ. 2017ರಲ್ಲಿ ಮಾಡಲಾದ ಒಪ್ಪಂದದ ಅವಧಿ 2021ರವರೆಗೂ ಇದೆ. ಈ ಒಪ್ಪಂದದ ಕರಾರಿನ ಅನ್ವಯ ಅವರು, ಕ್ಲಬ್ ತೊರೆಯುವುದಾದರೆ ಕಳೆದ ಜೂನ್‌ನಲ್ಲೇ ತಿಳಿಸಬೇಕಾಗಿತ್ತು. ಆದರೆ ಕರೊನಾ ಕಾರಣದಿಂದಾಗಿ ಹಾಲಿ ಫುಟ್‌ಬಾಲ್ ಋತು ತಡವಾಗಿ ಮುಕ್ತಾಯ ಕಂಡಿರುವುದರಿಂದ ಮೆಸ್ಸಿ, ಕ್ಲಬ್ ತೊರೆಯುವ ಬಗ್ಗೆ ತಿಳಿಸಿರುವುದು ಕೂಡ ತಡವಾಗಿದೆ. ಹೀಗಾಗಿ ಈ ಕರಾರು ಉಲ್ಲಂಘನೆಯ ಬಗ್ಗೆ ಬಾರ್ಸಿಲೋನಾ ಕ್ಲಬ್, ಕಾನೂನು ಹೋರಾಟವನ್ನೂ ನಡೆಸಲು ಮುಂದಾಗುವ ಸಾಧ್ಯತೆ ಇದೆ.

    VIDEO | 16 ವರ್ಷಗಳ ಬಳಿಕ ಬಾರ್ಸಿಲೋನಾ ಕ್ಲಬ್‌ಗೆ ಮೆಸ್ಸಿ ಗುಡ್‌ಬೈ, ಅಭಿಮಾನಿಗಳಿಂದ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts