More

    ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಕರೊನಾ ಪಾಸಿಟಿವ್

    ನವದೆಹಲಿ: ‘ಹಾರುವ ಸಿಖ್’ ಖ್ಯಾತಿಯ ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್ ಕರೊನಾ ಸೋಂಕಿತರಾಗಿದ್ದು, ಚಂಡೀಗಢದ ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದಾರೆ. 91 ವರ್ಷದ ಅವರು ಸೋಂಕಿನ ಯಾವುದೇ ಲಕ್ಷಣ ಹೊಂದಿಲ್ಲ.

    ‘ನಮ್ಮ ಮನೆಯ ಕೆಲ ಕೆಲಸದವರು ಪಾಸಿಟಿವ್ ಆಗಿದ್ದರು. ಹೀಗಾಗಿ ಕುಟುಂಬದ ಸದಸ್ಯರೆಲ್ಲರೂ ಪರೀಕ್ಷೆ ಮಾಡಿಸಿಕೊಂಡಿದ್ದೆವು. ಬುಧವಾರ ನನ್ನ ವರದಿ ಮಾತ್ರ ಪಾಸಿಟಿವ್ ಬಂದಿದ್ದು, ನನಗೆ ಅಚ್ಚರಿಯಾಗಿದೆ. ನನಗೆ ಜ್ವರ ಅಥವಾ ಕೆಮ್ಮು ಇಲ್ಲ. 3-4 ದಿನಗಳಲ್ಲಿ ಗುಣಮುಖನಾಗುವೆ ಎಂದು ವೈದ್ಯರು ಹೇಳಿದ್ದಾರೆ. ನಾನೀಗಲೂ ಜಾಗಿಂಗ್ ಮಾಡುತ್ತಿದ್ದೇನೆ’ ಎಂದು ಮಿಲ್ಖಾ ತಿಳಿಸಿದ್ದಾರೆ.

    ಇದನ್ನೂ ಓದಿ: ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲಾ ಕೌರ್ ವರದಿ ನೆಗೆಟಿವ್ ಬಂದಿದೆ. ಪುತ್ರ ಹಾಗೂ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಸದ್ಯ ದುಬೈನಲ್ಲಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 4 ಸ್ವರ್ಣ ಪದಕ ಜಯಿಸಿರುವ ಮಿಲ್ಖಾ, 1958ರ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಓಟದ ಫೈನಲ್‌ನಲ್ಲಿ 4ನೇ ಸ್ಥಾನ ಗಳಿಸಿದ್ದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.

     ಅಹರ್ನಿಶಿ ಟೆಸ್ಟ್​ ಪಂದ್ಯವಾಡಲಿದೆ ಭಾರತ ಮಹಿಳಾ ತಂಡ, ಮೊದಲ ಎದುರಾಳಿ ಯಾರು ಗೊತ್ತ?

    ಭಾರತ ತಂಡಕ್ಕೆ ಕೋಚ್ ಆಗಲಿದ್ದಾರೆಯೇ ಕನ್ನಡಿಗ ರಾಹುಲ್?

    VIDEO | ಕ್ರಿಕೆಟಿಗ ರಾಬಿನ್ ಉತ್ತಪ್ಪ ಡಾನ್ಸ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts