More

    ಯುವ ಪೀಳಿಗೆಗೆ ಇವರೇ ಸ್ಫೂರ್ತಿ: 42 ಲಕ್ಷ ಸಂಬಳದ ಉದ್ಯೋಗ ತೊರೆದು ಬಹುಕೋಟಿ ಕಂಪೆನಿ ಕಟ್ಟಿದ ಯುವ ಉದ್ಯಮಿ

    ನವದೆಹಲಿ: ಉತ್ತಮ ಸಂಬಳದ ಉದ್ಯೋಗ ಪಡೆಯಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಇಲ್ಲೊಬ್ಬರು 42 ಲಕ್ಷ ಸಂಬಳದ ಉದ್ಯೋಗ ತೊರೆದು ಕಂಪನಿ ಕಟ್ಟಿದ್ದಾರೆ.

    32 ವರ್ಷದ ರೋಹಿತ್‌ ಮಾಂಗ್ಲಿಕ್‌ ಎಜ್ಯುಗೊರಿಲ್ಲಾ ಕಂಪೆನಿಯ ಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ. ಅವರು 2012ರಲ್ಲಿ ಎನ್‌ಐಟಿಯಿಂದ ಬಿಟೆಕ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ರೋಹಿತ್‌ ಮಾಂಗ್ಲಿಕ್‌ ಅವರು ದೊಡ್ಡ ದೊಡ್ಡ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ರೋಹಿತ್‌ ಮಾಂಗ್ಲಿಕ್‌ ಅವರು ಉದ್ಯೋಗವನ್ನು ತೊರೆದು ಕೇವಲ ಏಳು ಮಂದಿ ಉದ್ಯೋಗಿಗಳೊಂದಿಗೆ ಕೆರಿಯರ್‌ ಕೌನ್ಸಿಲಿಂಗ್‌ ಅನ್ನು ಪ್ರಾರಂಭಿಸಿದ್ದರು. ಈ ಯೋಜನೆ ಕೂಡ ಒಂದು ಹಂತದಲ್ಲಿ ವಿಫಲಗೊಂಡಿತ್ತು. ಆ ಬಳಿಕ ಅವರು ಲಕ್ನೋಗೆ ತೆರಳಿದ್ದು, ಅಲ್ಲಿ ಮಾಂಗ್ಲಿಕ್‌ ಅವರು ಕಚೇರಿಯೊಂದನ್ನು ಪ್ರಾರಂಭಿಸಿದ್ದರು. ಆದರೆ ಅದರಿಂದಲೂ ನಷ್ಟ ಅನುಭವಿಸಿದರು. ಎರಡು ಸೋಲಿನ ಬಳಿಕ ಮಾಂಗ್ಲಿಕ್‌ ಅವರು ವಿದ್ಯಾರ್ಥಿಗಳ ಬಳಿಗೇ ತೆರಳಿ ಅವರ ನೈಜ ಅಗತ್ಯಗಳನ್ನು ಅರ್ಥಮಾಡಿಕೊಂಡರು. 2020ರಲ್ಲಿ ಮಾಂಗ್ಲಿಕ್‌ ಅವರು ಎಜ್ಯುಗೊರಿಲ್ಲಾ ಹೆಸರಿನ ಅಪ್ಲಿಕೇಷನ್‌ ಅನ್ನು ಸಿದ್ಧಪಡಿಸಿದರು. ಈ ಅಪ್ಲಿಕೇಷನ್‌ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ.

    ಇದನ್ನೂ ಓದಿ:  ಸೊಂಟದ ಸುತ್ತ ಹಣ ಕಟ್ಟಿಕೊಂಡು ಸಾಗಾಟ; 7.5ಲಕ್ಷ ರೂ. ವಶಕ್ಕೆ!

    ಉದ್ಯಮಿ ರೋಹಿತ್‌ ಮಾಂಗ್ಲಿಕ್‌ ಕೈಯಲ್ಲಿದ್ದ ಉದ್ಯೋಗವನ್ನು ತೊರೆದು ಸ್ವಂತ ಸ್ಟಾರ್ಟಪ್‌ ಪ್ರಾರಂಭಿಸುವಾಗ ಅವರಿಗೆ ಇದ್ದ ವಾರ್ಷಿಕ ಪ್ಯಾಕೇಜ್‌ 42 ಲಕ್ಷ ರೂಪಾಯಿ ಆಗಿತ್ತು. ಈಗ ಮಾಂಗ್ಲಿಕ್‌ ಅವರ ಕಂಪೆನಿಯ ವಾರ್ಷಿಕ ವಹಿವಾಟು 10 ಕೋಟಿ ರೂಪಾಯಿಗೆ ಬೆಳೆದಿದೆ.

    ಇದನ್ನೂ ಓದಿ:  1 ಕೋಟಿ ರೂ. ಬೆಲೆ ಬಾಳುವ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಖರೀದಿಸಿದ ನಟ ರಮೇಶ್ ಅರವಿಂದ್
    ರೋಹಿತ್‌ ಮಾಂಗ್ಲಿಕ್‌ ತಮ್ಮ ಲಾಭದಾಯಕ ಕಾರ್ಪೋರೇಟ್ ಉದ್ಯೋಗವನ್ನು ತೊರೆದು 2020ರಲ್ಲಿ ಎಜ್ಯುಗೊರಿಲ್ಲಾ ಎಂಬ ಸ್ಟಾರ್ಟಪ್‌ ಅನ್ನು ಪ್ರಾರಂಭಿಸಿದರು. ಮೂರು ವರ್ಷಗಳಲ್ಲಿ ಈ ಸ್ಟಾರ್ಟಪ್‌ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಟಾಪ್‌ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಎಜ್ಯುಗೊರಿಲ್ಲಾ ಕಂಪೆನಿಯಲ್ಲಿ 300 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

    ನುಗ್ಗಿಕೇರಿ ಆಂಜನೇಯನ ದರ್ಶನ ಪಡೆದ ಬಿಎಸ್‌ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts