More

    ಅಡಕೆ ಬಿಟ್ಟು ಪರ್ಯಾಯ ಬೆಳೆ ಬೆಳೆಯಿರಿ: ಮಹಮ್ಮದ್ ಅಮಾನುಲ್ಲಾಖಾನ್

    ಸಾಗರ: ಈಗ ಆರ್ಥಿಕವಾಗಿ ಲಾಭ ತರಲಿದೆ ಎನ್ನುವ ಒಂದೇ ಉದ್ದೇಶದಿಂದ ಅಡಕೆ ಬೆಳೆ ಒಂದರ ಮೇಲೆಯೇ ಖಂಡಿತ ಅವಲಂಬಿತರಾಗಬೇಡಿ. 1972ಕ್ಕೂ ಮುನ್ನ ಅಡಕೆಗಿಂತ ಅಕ್ಕಿಗೆ ಬೆಲೆ ಹೆಚ್ಚಿ ಅಡಕೆ ತೋಟ ಕಡಿದು ಬೇರೆ ಬೆಳೆ ಬೆಳೆದ ಉದಾಹರಣೆ ನಮ್ಮ ಮುಂದಿದೆ. ಪ್ರಸ್ತುತ ಅಡಕೆ ಬೆಳೆಯ ವಿಸ್ತಾರ ಗಮನಿಸಿದರೆ ಮುಂದೊಂದು ದಿನ ಮತ್ತೆ ಇಂತಹ ದುಸ್ಥಿತಿ ಎದುರಾಗುವುದರಲ್ಲಿ ಅನುಮಾನವಿಲ್ಲ ಎಂದು ಪ್ರಗತಿಪರ ಕೃಷಿಕ, ಕಾಫಿ ಬೆಳೆಗಾರ ಮಹ್ಮದ್ ಅಮಾನುಲ್ಲಾಖಾನ್ ಹೇಳಿದರು.
    ಮಂಗಳವಾರ ನಗರೇಶ್ವರ ದೇವಾಲಯದ ಸಭಾಂಗಣದಲ್ಲಿ ಚಿಕ್ಕಮಗಳೂರು ಕಾಫಿ ಮಂಡಳಿ, ಸಾಗರ ಸಹ್ಯಾದ್ರಿ ಕಾಫಿ ಸೊಸೈಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಕಾಫಿ ಬೇಸಾಯ ವಿಚಾರ ಸಂಕಿರಣ ಒಂದು ದಿನದ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
    ಸಾಗರ ನೆಲವು ಕಾಫಿ ಬೆಳೆಯುವುದಕ್ಕೆ ಅತ್ಯಂತ ಸೂಕ್ತ. ಕಾಫಿ ಬೆಲೆ ಏರಿಳಿತವಾಗಬಹುದು ಆದರೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಇದಕ್ಕೆ ಬೇಡಿಕೆ ಕುಸಿತ ಎನ್ನುವುದಿಲ್ಲ. ಆದರೆ ಅಡಕೆ ಸ್ಥಿತಿ ಹಾಗಲ್ಲ. ಮುಂದೆ ನಿರೀಕ್ಷಿತ ಬೇಡಿಕೆ ಇಲ್ಲವಾಗಬಹುದು. ಜತೆಗೆ ದರವೂ ಕುಸಿದರೆ ಅದರ ಉತ್ಪಾದನಾ ವೆಚ್ಚ ಸರಿದೂಗಿಸುವುದು ಕಷ್ಟವಾಗಲಿದೆ. ನಮ್ಮ ತೋಟಗಳಲ್ಲಿ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆದು ಮುಂದಾಗಬಹುದಾದ ಅನಾಹುತವನ್ನು ರೈತರು ಎದುರಿಸುವಂತಾಗಬೇಕು ಎಂದರು.

    ಬಾಳೆಹೊನ್ನೂರು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಶಿವಪ್ರಸಾದ್, ಬೇಸಾಯ ಶಾಸ್ತ್ರ ವಿಭಾಗದ ವಿಷಯ ತಜ್ಞ ರುದ್ರೇಗೌಡ, ಕೊಪ್ಪ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಡಾ. ಪ್ರಭುಗೌಡ, ಸದಸ್ಯ ವೆಂಕಟೇಶ್ ಕವಲಕೋಡು, ಅಶೋಕ ಸೂರೇಮನೆ, ಕಾರ್ಯದರ್ಶಿ ಪ್ರಣತಿ ಹೆಗಡೆ ಇತರರಿದ್ದರು.

    ಸಹಕಾರ ವ್ಯವಸ್ಥೆಯಲ್ಲಿಯೇ ಅಗತ್ಯವಿರುವ ಕಾಫಿಯನ್ನು ಸಂಸ್ಥೆಯ ಸದಸ್ಯರೂ ಖರೀದಿಸಿದರೆ ಸಂಸ್ಥೆಯ ಪ್ರಗತಿಗೆ ಬಲ ನೀಡಿದಂತಾಗಲಿದೆ. ಅಲ್ಲದೆ ಅಡಕೆ ಬೆಳೆ ಮೇಲೆ ಮಾತ್ರ ನಿರೀಕ್ಷೆ ಹೊಂದಿರುವ ನಾವು ಕುಸಿಯುತ್ತಿರುವ ಅದರ ದರದ ಲೆಕ್ಕಾಚಾರ ಹಾಕಿದರೆ ಉತ್ಪಾದನಾ ವೆಚ್ಚಕ್ಕೆ ಸಮನಾಗುವ ದಿನ ದೂರವಿಲ್ಲ. ಹಾಗಾಗಿ ಬೆಳೆಗಾರರು ಎಚ್ಚೆತ್ತು ಉಪ ಬೆಳೆ ಕಡೆಗೂ ಗಮನಹರಿಸಬೇಕು.
    ಪಿ.ಎನ್.ಶಶಿಧರ ಹರತಾಳು ಸಹ್ಯಾದ್ರಿ ಪ್ರಾಂತ್ಯ ಕಾಫಿ ಸೊಸೈಟಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts