More

    ಗೆಲುವಿನ ಹಳಿಗೆ ಮರಳಿದ ದಬಾಂಗ್ ದೆಹಲಿ: ಸೋಲಿನ ಸರಪಳಿ ಕಳಚಿದ ತೆಲುಗು ಟೈಟಾನ್ಸ್​

    ಹೈದರಾಬಾದ್: ರೈಡರ್ ಅಶು ಮಲಿಕ್ (17 ಅಂಕ) ಅವರ ಅಮೋಘ ಆಟದ ಫಲವಾಗಿ ದಬಾಂಗ್ ದಿಲ್ಲಿ ತಂಡ ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯಲ್ಲಿ ಯು ಮುಂಬಾ ತಂಡವನ್ನು 6 ಅಂಕಗಳಿಂದ ಮಣಿಸಿ, ಗೆಲುವಿನ ಹಳಿಗೆ ಮರಳಿದೆ. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಬಾಂಗ್ ತಂಡ 39 – 33 ಅಂಕಗಳಿಂದ ಮುಂಬಾಗೆ ಸೋಲುಣಿಸಿತು. ಇದರೊಂದಿಗೆ 8ನೇ ಜಯ ಗಳಿಸಿದ ದಬಾಂಗ್ 49 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ದಿನದ ಎರಡನೇ ಪಂದ್ಯದಲ್ಲಿ ಸ್ಟಾರ್​ ರೈಡರ್​ ಪವನ್​ ಶೆರಾವತ್​ (16) ತೋರಿದ ನಿರ್ವಹಣೆಯಿಂದ ಆತಿಥೇಯ ತೆಲುಗು ಟೈಟಾನ್ಸ್​ ತಂಡ ಸೋಲಿನ ಸರಪಳಿ ಕಳಚಿ 49-32 ರಿಂದ ಯುಪಿ ಯೋಧಾಸ್​ ಎದುರು ಗೆಲುವು ದಾಖಲಿಸಿದೆ.

    ದ್ವಿತೀಯಾರ್ಧ ಆರಂಭಗೊಂಡ 2ನೇ ನಿಮಿಷದಲ್ಲೇ ಮುಂಬಾ ತಂಡವನ್ನು ಕಟ್ಟಿಹಾಕಿದ ದಬಾಂಗ್ ಆಟಗಾರರು ಮುನ್ನಡೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು. ಪಂದ್ಯ ಮುಕ್ತಾಯಕ್ಕೆ 30 – 26 ಅಂಕಗಳ ಅಂತರದಿಂದ ಮುಂಬಾ ವಿರುದ್ಧ ಮೇಲುಗೈ ಸಾಧಿಸಿದ ದಬಾಂಗ್ ದೆಹಲಿ, ನಾಲ್ಕು ಅಂಕಗಳ ಮುನ್ನಡೆ ಕಂಡುಕೊಂಡಿತು. ದಬಾಂಗ್ ಪರ ಏಕಾಂಗಿ ಹೋರಾಟ ನಡೆಸಿದ ರೈಡರ್ ಅಶು ಮಲಿಕ್ ಸೂಪರ್ ಟೆನ್ ಸಾಹಸದಿಂದ ಕಂಗೊಳಿಸಿದರು. ಅತ್ತ ಗುಮಾನ್ ಸಿಂಗ್ ಕೂಡ ಸೂಪರ್ ಟೆನ್ ಅಂಕ ಗಳಿಸಿ ಮುಂಬಾ ಹೋರಾಟಕ್ಕೆ ಬೆಂಬಲ ನೀಡಿದರು.

    ಅಶು ಮಲಿಕ್ ಅವರ ಮುಂದುವರಿದ ರೈಡಿಂಗ್ ತಂಡದ ಮುನ್ನಡೆಯನ್ನು 33 -27ಕ್ಕೆ ಹೆಚ್ಚಿಸಿಕೊಂಡ ದಬಾಂಗ್ ತಂಡ ಗೆಲುವಿಗೆ ಮತ್ತಷ್ಟು ಸನಿಹಕೊಂಡಿತು.35ನೇ ನಿಮಿಷಕ್ಕೆ 36- 29ರಲ್ಲಿ ಅಂತರ ಕಾಯ್ದುಕೊಂಡ ದಬಾಂಗ್, ಮುಂಬಯಿ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿತು. ಅಶು ಅವರ ಏಕಾಂಗಿ ಹೋರಾಟ ಮುಂದುವರಿದರೆ, ವಿಶಾಲ್ ಭಾರದ್ವಾಜ್ 5 ಅಂಕಗಳ ಕೊಡುಗೆ ನೀಡಿದರು. ಕೊನೆಯ ಹಂತದಲ್ಲಿ ಮುಂಬಾ ಆಲ್ ರೌಂಡ್ ಪ್ರದರ್ಶನ ನೀಡಿ ತಂಡದ ಹಿನ್ನಡೆಯನ್ನು 4 ಅಂಕಗಳಿಗೆ ತಗ್ಗಿಸಿತು. ಒತ್ತಡ ನಿಭಾಯಿಸಿದ ದಬಾಂಗ್ 39-33 ಅಂಕಗಳಿಂದ ಮುಂಬಾ ತಂಡದ ಸವಾಲನ್ನು ಮೀರಿ ನಿಂತಿತು.

    ಸಮಬಲದ ಹೋರಾಟ ನೀಡಿದ ದಬಾಂಗ್ ದೆಹಲಿ ಮತ್ತು ಯು ಮುಂಬಾ ತಂಡಗಳು ಪಂದ್ಯದ ಪ್ರಥಮಾರ್ಥಕ್ಕೆ 16-16 ಅಂಕಗಳಿಂದ ಸಮಬಲದ ಹೋರಾಟ ನೀಡಿದವು. ದಬಾಂಗ್ ಅಶು ಮಲಿಕ್ ಮತ್ತು ಮುಂಬಾ ತಂಡದ ಗುಮಾನ್ ಸಿಂಗ್ ಅವರ ಏಕಾಂಗಿ ಹೋರಾಟದ ಫಲವಾಗಿ ಎರಡೂ ತಂಡಗಳು ಪೈಪೋಟಿ ನಡೆಸಿದವು.

    ಜನವರಿ 21ರಂದು ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್ ಹಾಗೂ ಗುಜರಾತ್ ಜಯಂಟ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಪೈಪೋಟಿ ನಡೆಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts