More

    ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ

    ಗುವಾಹಟಿ: ಮಹಾರಾಷ್ಟ್ರ ಸರ್ಕಾರಕ್ಕೆ ಕಂಟಕವಾಗಿರುವ ರೆಬೆಲ್​ ನಾಯಕ ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನನ್ನು ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ನಾಯಕನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

    ರೆಬೆಲ್​ ಶಾಸಕರು ಉಳಿದುಕೊಂಡಿದ್ದ ಗುವಾಹಟಿಯ ಪಂಚತಾರಾ ಹೋಟೆಲ್ ​​ಮುಂಭಾಗದಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಮಹಾರಾಷ್ಟ್ರದ ಸತಾರ ಜಿಲ್ಲೆಯ ಶಿವಸೇನೆ ಪಕ್ಷದ ಉಪಮುಖ್ಯಸ್ಥನಾಗಿರುವ ಸಂಜಯ್​ ಭೋಸ್ಲೆ ಅವರು ಏಕನಾಥ್​ ಶಿಂಧೆ ಅವರ ನಾಯಕತ್ವವನ್ನು ವಿರೋಧಿಸಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು.

    ನಾನು ಪಕ್ಷದ ನಿಷ್ಠಾವಂತನಾಗಿದ್ದು, ಶಿವಸೇನೆ ಸರ್ಕಾರ ಇಕ್ಕಟ್ಟಿಗೆ ಕಾರಣರಾಗಿರುವ ಏಕನಾಥ್​ ಶಿಂದೆ ಅವರಿಗೆ ವಿರೋಧ ವ್ಯಕ್ತಪಡಿಸುತ್ತೇನೆ. ಎಲ್ಲಾ ಶಾಸಕರು ಮತ್ತೆ ಮಾತೃಶ್ರೀಗೆ ತೆರಳಿ ಸರ್ಕಾರವನ್ನು ಬಲಪಡಿಸಿ ಎಂದು ಘೋಷಣೆ ಕೂಗುತ್ತಿದ್ದರು. ಪ್ರತಿಭಟನೆ ನಡೆಸುವ ಬೆದರಿಕೆ ನೀಡಿದ್ದರಿಂದ ಯಾವುದೇ ಅನುಮತಿ ಇಲ್ಲದಿರುವುದರಿಂದ ಅವರನ್ನು ಬಂಧಿಸಬೇಕಾಯಿತು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.ಏಳು ದಿನಗಳಿಂದ ಅಸ್ಸಾಂನ ಗುವಾಹಟಿಯ ಹೋಟೆಲ್​ನಲ್ಲಿ ನೆಲೆಸಿದ್ದ ರೆಬೆಲ್​ ನಾಯಕರು ಶುಕ್ರವಾರ ಮುಂಬೈಗೆ ವಾಪಸ್ಸಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್​)

    ಅತಂತ್ರ ಸ್ಥಿತಿಯಲ್ಲಿ “ಮಹಾ” ಸರ್ಕಾರ: ಇತ್ತ ರೆಬೆಲ್​ ಶಾಸಕರಿಗೆ ಖರ್ಚಾಗಿದ್ದೆಷ್ಟು ಗೊತ್ತಾ?

    ಎಚ್ಚೆತ್ತುಕೊಳ್ಳದ ಖಾಸಗಿ ಬಸ್​​: ಅಪಾಯ ಲೆಕ್ಕಿಸದೇ ಬಸ್​​ ಮೇಲೆ ಕುಳಿತು ವಿದ್ಯಾರ್ಥಿಗಳ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts