More

    ಕಾನೂನು ಉಲ್ಲಂಘಿಸಿದ್ರೆ ಕ್ರಮ

    ಕಾಗವಾಡ: ದೆಹಲಿಯ ನಿಜಾಮುದ್ದೀನ ಮಸೀದಿಯಲ್ಲಿ ಆಯೋಜಿಸಿದ್ದ ಜಮಾತ್‌ನಲ್ಲಿ ಭಾಗವಹಿಸಿದ್ದರೆ ಅಥವಾ ಅವರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಗೊತ್ತಿದ್ದರೂ ತಿಳಿಸದೇ ಇದ್ದರೆ ಅದು ದೇಶ ದ್ರೋಹದ ಕೆಲಸವಾಗಲಿದೆ ಎಂದು ಕಾಗವಾಡ ಪಿಎಸ್‌ಐ ಹನುಮಂತ ಶಿರಹಟ್ಟಿ ಹೇಳಿದರು.

    ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಮಿತಿ ಶಾಲೆಯ ಸಭಾಂಗಣದಲ್ಲಿ ಕರೊನಾ ವೈರಸ್ ನಿಯಂತ್ರಣ ಜಾಗೃತಿ, ಹಿಂದು, ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಜ್ಯದಲ್ಲಿ ಮಹಾಮಾರಿ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಸಾಗಿದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಏ. 14ರವರೆಗೆ ಮನೆಯಿಂದ ಹೊರಗೆ ಬಾರದೆ ಇರುವುದು ಉತ್ತಮ ಎಂದರು. ವಿರಳ ಸಾಂದ್ರತೆ ಹೊಂದಿರುವ ಇಟಲಿ, ಅಮೇರಿಕಾ, ಜರ್ಮನಿ, ಜಪಾನ, ಬ್ರಿಟನ ಮೊದಲಾದ ಮುಂದುವರೆದ ದೇಶಗಳೇ ಕರೊನಾ ಹಾವಳಿಗೆ ತತ್ತರಿಸಿ ಹೋಗಿವೆ. ಅಧಿಕ ಸಾಂದ್ರತೆ ಹೊಂದಿರುವ ಭಾರತ ಅತ್ಯಂತ ಎಚ್ಚರಿಕೆ ವಹಿಸಿಬೇಕಾಗಿರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಮುಸ್ಲಿಮ್‌ರು ಮಸೀದಿಗಳಿಗೆ ಹೋಗಿ ನಮಾಜ್ ಮಾಡದೇ ಮನೆಯಲ್ಲಿಯೇ ಇದ್ದು ನಮಾಜ್ ಮಾಡಬೇಕು. ಕಾನೂನು ಉಲ್ಲಂಘಿಸಿ ಯಾರಾದರೂ ನಮಾಜ್‌ನಲ್ಲಿ ಪಾಲ್ಗೊಂಡರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಶೇಡಬಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿವೇಕ ಬನ್ನೆ ಮಾತನಾಡಿ, ಪ್ರತಿಯೊಬ್ಬರು ಸರಕಾರ ನೀಡುವ ಆದೇಶಗಳನ್ನು ಪಾಲಿಸುತ್ತಾ ಯಾರು ಮನೆಯಿಂದ ಹೊರಗೆ ಬಾರದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಪಪಂ ಸದಸ್ಯರು, ಹಿಂದು, ಮುಸ್ಲಿಂ ಮುಖಂಡರು, ವ್ಯಾಪಾರಸ್ಥರು, ಸಾರ್ವಜನಿಕರು ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts