More

    ಕಾನೂನು ಅರಿತರೆ ಸಹಬಾಳ್ವೆ ಸಾಧ್ಯ

    ಕೊಟ್ಟೂರು: ಕಾನೂನನ್ನು ಪ್ರತಿಯೊಬ್ಬರು ಅರಿತರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಬದುಕಲು ಸಾಧ್ಯ ಎಂದು ತಹಸೀಲ್ದಾರ್ ಜಿ.ಕೆ. ಅಮರೇಶ ಹೇಳಿದರು.

    ಇದನ್ನೂ ಓದಿ: 370ನೇ ವಿಧಿ ರದ್ದತಿ; ಸುಪ್ರೀಂ ಕೋರ್ಟ್​ ತೀರ್ಪಿಗೆ ಕಾನೂನು ಮಾನ್ಯತೆ ಇಲ್ಲ ಎಂದ ಪಾಕಿಸ್ತಾನ

    ತಾಲೂಕಿನ ಸುಟ್ಟಕೋಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಹಕ್ಕುಗಳ ದಿನ 2023ರ ಪ್ರಯುಕ್ತ ಸಾರ್ವಜನಿಕರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಈಚೆಗೆ ಮಾತನಾಡಿದರು.

    ರೈತರು, ಅನಕ್ಷರಸ್ಥರು ಕಾನೂನಿಗೆ ಭಯಪಡುತ್ತಾರೆ ಹಾಗೂ ಗೌರವ ಕೊಡುತ್ತಾರೆ. ಇದನ್ನು ಅಕ್ಷರಸ್ಥರಲ್ಲಿ ಕಂಡು ಬರುವುದು ತೀರ ವಿರಳ. ಕಾನೂನು ಉಲ್ಲಂಘನೆ ಇವರಿಂದಲೇ ಎಂದು ಅಭಿಪ್ರಾಯ ಪಟ್ಟರು.

    ಫ್ಯಾನಲ್ ವಕೀಲರಾದ ಕೆ.ಎಚ್.ಎಂ.ಶೈಲಜಾ ಕೌಟಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕುರಿತು ಮಾತನಾಡಿ, ಇಲ್ಲಿಯ ತನಕ ಸುಟ್ಟಕೋಡಿಹಳ್ಳಿಯಿಂದ ಯಾವುದೇ ಮಹಿಳಾ ದೌರ್ಜನ್ಯ ಕೇಸು ಬಂದಿಲ್ಲ.

    ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಸುರಕ್ಷಿತ ಮತ್ತು ನೆಮ್ಮದಿ, ಶಾಂತಿಯಿಂದ ಇದ್ದಾರೆ ಎಂದು ಪ್ರಶೆಂಸಿಸಿದರು. ವಿವಾಹಿತ ವಿದ್ಯಾವಂತರಿಂದ ಹೆಚ್ಚು ವಿಚ್ಚೇದನ ಕೇಸುಗಳು ಕೋರ್ಟಗೆ ಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ, ವಿದ್ಯಾವಂತರಲ್ಲಿ ಸೌಹಾರ್ಧತೆ, ಸಹಬಾಳ್ವೆ ಕೊರತೆ ಹೆಚ್ಚುರುವುದರಿಂದಾಗಿ ವಿಚ್ಚೇದನವಾಗುತ್ತವೆ ಎಂದರು.

    ಫ್ಯಾನಲ್ ವಕೀಲರಾದ ಎನ್.ಜಯಮ್ಮ, ಪಿ.ಎಸ್.ಐ.ಮಾಲಿಕ್ ಸಾಹೇಬ್ ಖಲಾರಿ, ಉಜ್ಜಿನಿ ವಲಯ ಇಸಿಒ ಆನಂದ, ಪಿಡಿಒ ಉಮಾಪತಿ, ವಕೀಲರ ಸಂಘದ ಉಪಾಧ್ಯಕ್ಷ ವೆಂಕಟೇಶ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಣಜಿ ಶಾಂತಕುಮಾರ್, ರೇವಣ್ಣ, ಕೊಟ್ಟೂರು ವಲಯದ ಇಸಿಒ ನಿಂಗಪ್ಪ, ಶಾಲೆ ಮುಖ್ಯಗುರುಗಳಾದ ತಿಪ್ಪಣ್ಣ, ಶಿಕ್ಷಕಿ ಮೆಹಬೂಬ, ಸಿ.ಆರ್.ಪಿ.ದುರುಗಪ್ಪ, ವಕೀಲರಾದ ಕರಿಬಸವರಾಜ್, ರಮೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts