More

    ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಟ್ವಿಟರ್​ಗೆ ಖಡಕ್​ ಎಚ್ಚರಿಕೆ ನೀಡಿದ ನೂತನ ಐಟಿ ಸಚಿವ!

    ನವದೆಹಲಿ: ಪ್ರಧಾನಿ ಮೋದಿ ಸಂಪುಟದಲ್ಲಿ ನೂತನ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವರಾಗಿ ಅಶ್ವಿನಿ ವೈಷ್ಣವ್​​ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ದೈತ್ಯ, ಟ್ವಿಟರ್​ಗೆ​ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ಗುರುವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು “ಈ ನೆಲದ ಕಾನೂನು ಸರ್ವೋಚ್ಚ” ಎನ್ನುವ ಮೂಲಕ ಕೇಂದ್ರ ಹೊಸ ಐಟಿ ನಿಯಮಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.

    ಮೂರನೇ ವ್ಯಕ್ತಿಯ ವಿಷಯಗಳಿಗೆ ಸಾಮಾಜಿಕ ಜಾಲತಾಣ ವೆಬ್​ಸೈಟ್​ಗಳನ್ನು (50 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ) ಹೊಣೆಗಾರರನ್ನಾಗಿ ಮಾಡುವ ಹೊಸ ಐಟಿ ನಿಯಮಗಳನ್ನು ಪಾಲಿಸುವ ಸಂಬಂಧ ಟ್ವಿಟರ್​ ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರ ನಡುವೆಯೇ ನೂತನ ಐಟಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.

    ಇಂದು ಬೆಳಿಗ್ಗೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿರುವ ಟ್ವಿಟರ್​, ರೆಸಿಡೆಂಟ್​ ಗ್ರೀವಿಯನ್ಸ್ ಆಫೀಸರ್ ನೇಮಕ ಮಾಡಿಕೊಳ್ಳಲು 8 ವಾರಗಳ ಸಮಯ ಕೇಳಿದೆ. ಹೊಸ ನಿಯಮದ ಪ್ರಕಾರ ಭಾರತೀಯರನ್ನೇ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಬೇಕು.

    ನಿಯಮಗಳನ್ನು ಪಾಲಿಸಲು ವಿಫಲವಾಗಿದ್ದಕ್ಕೆ ನ್ಯಾಯಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದ ಎರಡು ದಿನಗಳ ನಂತರ ಟ್ವಿಟರ್​ 8 ವಾರಗಳ ಕಾಲಾವಕಾಶವನ್ನು ಕೇಳಿದೆ. ಭಾರತ ಮೂಲದ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ಸರ್ಕಾರ ನಿಗದಿಪಡಿಸಿದ ಗಡುವನ್ನು ಕಂಪನಿ ಈಗಾಗಲೇ ಮೀರಿದೆ. (ಏಜೆನ್ಸೀಸ್​)

    ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

    ಹಸಿವು ಮರೆಯಲು ಯೂಟ್ಯೂಬ್​ ನೋಡ್ತಿದ್ದ ದಿನಗೂಲಿ ಕಾರ್ಮಿಕನಿಂದು ಅದೇ ಯೂಟ್ಯೂಬ್​ನಿಂದ ಲಕ್ಷಾಧಿಪತಿ!

    ಅಧ್ಯಯನದಿಂದ ಸಾಬೀತಾಯ್ತು ಗಂಗೆಯ ಪಾವಿತ್ರ್ಯತೆ: ಹೆಣಗಳ ರಾಶಿಯ ನಡುವೆಯೂ ಕರೊನಾ ಕುರುಹಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts