More

    ಕಾನೂನು ಪಾಲಿಸಿದರೆ ಸಮಸ್ಯೆ ಉದ್ಭವಿಸಲ್ಲ: ಸಚಿವ ಡಾ. ಅಶ್ವತ್ಥನಾರಾಯಣ

    ಶಿವಮೊಗ್ಗ: ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
    ನಗರದ ವೀರಭದ್ರೇಶ್ವರ ಟಾಕೀಸ್‌ನಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ನವ ಭಾರತ ಮೇಳ ಸಮಾರೋಪದಲ್ಲಿ ಸಮಾಜದ ಗಣ್ಯರೊಂದಿಗೆ ಚಾಯ್ ಪೇ ಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರೃ ಲಭಿಸಿ 75 ವರ್ಷ ಕಳೆದರೂ ಅರಾಜಕತೆ, ಗೊಂದಲಗಳು ಇನ್ನೂ ಉಳಿದುಕೊಂಡಿದ್ದು, ಕಾನೂನು ಪಾಲನೆಯೊಂದೇ ಪರಿಹಾರ ಎಂದು ಅಭಿಪ್ರಾಯಪಟ್ಟರು.
    ಎಲ್ಲಿವರೆಗೆ ಕಾನೂನು ಪಾಲನೆ ನಮ್ಮ ಸಂಸ್ಕೃತಿ ಮತ್ತು ಆಚಾರ ಆಗುವುದಿಲ್ಲವೋ ಅಲ್ಲಿವರೆಗೂ ಸಮಸ್ಯೆಗಳು ಎದುರಾಗುವುದು ನಿಲ್ಲುವುದಿಲ್ಲ. ಸಾರ್ವಜನಿಕ ಸಹಭಾಗಿತ್ವ ಮತ್ತು ಬೋಧನೆ ಜತೆಯಲ್ಲೇ ಭಾಗವಹಿಸಬೇಕು. ಸಮಾಜದ ಸಮಸ್ಯೆ ನಮ್ಮ ಸಮಸ್ಯೆ ಎಂಬ ಭಾವನೆ ಮನದಾಳದಲ್ಲಿ ಮೂಡಬೇಕು. ಇಲ್ಲವಾದರೆ ಸುಶಿಕ್ಷಿತರಾದರೂ ಪ್ರಯೋಜನವಿಲ್ಲ ಎಂದು ಹೇಳಿದರು.
    ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಆರ್.ಕೆ.ಸಿದ್ದರಾಮಣ್ಣ ಮಾತನಾಡಿದರು. ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಬಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ವಿಶೇಷ ಆಹ್ವಾನಿತ ಎನ್.ಜೆ.ರಾಜಶೇಖರ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಸಂತೋಷ್ ಬಳ್ಳೆಕೆರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts