More

    ಕಾರ್ವಿುಕರ ಕೆಲಸದ ಅವಧಿ ವಿಸ್ತರಣೆಗೆ ಕಾನೂನು ತಿದ್ದುಪಡಿ: ಮಹಿಳೆಯರಿಗೂ ರಾತ್ರಿಪಾಳಿ ಅವಕಾಶ

    ಬೆಂಗಳೂರು: ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ- 2023ಕ್ಕೆ ವಿಧಾನಸಭೆ ಅನುಮೋದನೆ ನೀಡಿದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಕಾರ್ವಿುಕರ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.

    ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಯಾವುದೇ ವಾರದಲ್ಲಿ ಗರಿಷ್ಠ 48 ಗಂಟೆಗಳಿಗೊಳಪಟ್ಟು ಯಾವುದೇ ದಿನದಲ್ಲಿ ವಿರಾಮ, ಮಧ್ಯಂತರಗಳನ್ನು ಒಳಗೊಂಡಂತೆ, ಪ್ರಸ್ತುತದಲ್ಲಿರುವ ಕೆಲಸದ ಅವಧಿಯನ್ನು 9 ತಾಸಿನಿಂದ 12 ತಾಸಿನವರೆಗೆ ಹೆಚ್ಚಿಸಲು ಈ ತಿದ್ದುಪಡಿ ಅವಕಾಶ ಮಾಡಿಕೊಟ್ಟಿದೆ.

    ಇದನ್ನೂ ಓದಿ: ರಾಜ್ಯ ಚುನಾವಣೆಗೆ ಭದ್ರಕೋಟೆ: ಅರೆಸೇನಾ ಪಡೆಗಳಿಗೆ ಹೆಚ್ಚಿದ ಬೇಡಿಕೆ; ಗದ್ದಲ, ಹಿಂಸಾಚಾರದ ಭೀತಿ

    ದೈನಂದಿನ ಗರಿಷ್ಠ ಕೆಲಸದ ಅವಧಿ ಹೆಚ್ಚಿಸಲು ಅನುಕೂಲವಾಗುವಂತೆ ಕಾರ್ಖಾನೆಗಳ ಯಾವುದೇ ಗುಂಪು ಅಥವಾ ವರ್ಗ, ಕೆಲಸಗಾರನ ಒಟ್ಟು ಕೆಲಸದ ಗಂಟೆಗಳ ಅವಧಿಯನ್ನು ಮಧ್ಯಂತರವಿಲ್ಲದೆ ಆರು ತಾಸುಗಳವರೆಗೆ ವಿಸ್ತರಿಸಲಾಗುತ್ತಿದೆ. ಯಾವುದೇ ದಿನದಲ್ಲಿ ಅಥವಾ ಯಾವುದೇ ವಾರದಲ್ಲಿನ ಅವಧಿ ಮೀರಿದ ಕೆಲಸದ ಸಂದರ್ಭದಲ್ಲಿ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರದಲ್ಲಿ ಮಜೂರಿಯನ್ನು ಕೆಲಸಗಾರನಿಗೆ ಪಾವತಿಸಬೇಕಾದ ಕೆಲಸದ ವೇಳೆಗಳನ್ನು ನಿಯಮಿಸಲೂ ಇದರಿಂದ ಸಾಧ್ಯವಾಗಲಿದೆ. ಒಟ್ಟಾರೆ ಅಸಾಧಾರಣವಾದ ಕೆಲಸದ ಒತ್ತಡವನ್ನು ನಿಭಾಯಿಸಲು ಹೆಚ್ಚಿನ ಸಮಯದವರೆಗೆ ಕಾರ್ವಿುಕರನ್ನು ತೊಡಗಿಸಿಕೊಳ್ಳಲು ಕಾರ್ಖಾನೆಗಳಿಗೆ ಅವಕಾಶ ಸಿಗಲಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ, ಸಮಾನ ಅವಕಾಶ ಕಲ್ಪಿಸಿದಂತೆ ಅವಧಿ ಮೀರಿದ ಕೆಲಸಕ್ಕಾಗಿ ಮಹಿಳಾ ಕೆಲಸಗಾರರಿಗೆ ಅನುವು ಮಾಡಿಕೊಡಲಾಗುತ್ತಿದೆ.

    ರಾತ್ರಿಪಾಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆಯಬೇಕು. ಜತೆಗೆ ಅವರ ಸುರಕ್ಷತೆ, ಆರೋಗ್ಯ ಭದ್ರಪಡಿಸುವ ಷರತ್ತಿಗೊಳಪಟ್ಟು ಇಪ್ಪತ್ನಾಲ್ಕು ಗಂಟೆಗಳ ಯಾವುದೇ ಅವಧಿಯಲ್ಲಿ ಕೆಲಸ ಮಾಡಲು ಮಹಿಳೆಯರನ್ನು ಸಶಕ್ತಿಗೊಳಿಸಲೂ ಈ ತಿದ್ದುಪಡಿಯನ್ನು ಬಳಸಿಕೊಳ್ಳಲಾಗುತ್ತಿದೆ. ಕಾರ್ಖಾನೆಗಳ ಅಧಿನಿಯಮ 1948 (1948ರ ಕೇಂದ್ರ ಅಧಿನಿಯಮ 63)ನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. 20ಕ್ಕೂ ಅಧಿಕ ಕಾಯ್ದೆಗಳಲ್ಲಿ ಹಂಚಿಹೋಗಿದ್ದ ಕಾರ್ವಿುಕ ಕಾನೂನುಗಳನ್ನು ನಾಲ್ಕು ಮುಖ್ಯ ಸಂಹಿತೆಗಳಾಗಿ ಕೇಂದ್ರ ಸರ್ಕಾರ ರೂಪಿಸಿದೆ. ಅದರ ಮುಂದುವರಿದ ಭಾಗವಾಗಿ ಹಲವು ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.

    ಇದನ್ನೂ ಓದಿ: ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    ನಿಯಮಗಳು
    * ವಾರದಲ್ಲಿ 48 ಗಂಟೆಗಿಂತ ಹೆಚ್ಚಿನ ಕೆಲಸಕ್ಕೆ ಸಾಮಾನ್ಯ ದರಗಳಿಗಿಂತ ದುಪ್ಪಟ್ಟು ಮಜೂರಿ ಪಡೆಯಲು ಕಾರ್ವಿುಕ ಅರ್ಹ.
    * ಮಹಿಳೆಯರಿಗೆ ಯಾವುದೇ ಸ್ವರೂಪದ ಲೈಂಗಿಕ ಕಿರುಕುಳ ಆಗದಂತೆ ಕ್ರಮ ಕೈಗೊಳ್ಳಬೇಕು.
    * ಕಾರ್ಖಾನೆಯಲ್ಲಿಯೇ ದೂರು ನಿವಾರಣಾ ಕಾರ್ಯವ್ಯವಸ್ಥೆ ಹೊಂದಿರಬೇಕು, ಗೌಪ್ಯತೆ ಕಾಪಾಡಬೇಕು.
    * ಮಹಿಳಾ ಉದ್ಯೋಗಿಗಳು ಕಾರ್ವಿುಕರ ಸಭೆ, ಇತರ ವೇದಿಕೆಗಳಲ್ಲಿ ಲೈಂಗಿಕ ಕಿರುಕುಳದ ವಿಷಯ ಪ್ರಸ್ತಾಪಿಸಲು ಅವಕಾಶವಿರಬೇಕು
    * ಕಾರ್ಖಾನೆ ಒಳಗಷ್ಟೇ ಅಲ್ಲದೇ ಕಾರ್ಖಾನೆ ಸುತ್ತಮುತ್ತ ಹಾಗೂ ಕೆಲಸದ ವೇಳೆ ಮಹಿಳಾ ಕಾರ್ವಿುಕರು ಓಡಾಡುವುದಕ್ಕೆ ಸರಿಯಾದ ಬೆಳಕು, ಸಿಸಿ ಕ್ಯಾಮರಾ ವ್ಯವಸ್ಥೆ
    * ರಾತ್ರಿಪಾಳಿಯಲ್ಲಿ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಸಾಕಷ್ಟು ಮಹಿಳಾ ಭದ್ರತೆ, ವಿಶ್ರಾಂತಿ ಕೊಠಡಿ ಕಲ್ಪಿಸಬೇಕು.
    * ಮಹಿಳೆಯರಿಗೆ ರಾತ್ರಿಪಾಳಿಗಾಗಿ ಮಹಿಳಾ ಭದ್ರತೆಯೊಂದಿಗೆ ಸಾರಿಗೆ ಸೌಲಭ್ಯ ಒದಗಿಸಬೇಕು.
    * ಮಹಿಳೆಯರಿಗೆ ರಾತ್ರಿಪಾಳಿ ಕೆಲಸ ಕಡ್ಡಾಯವಲ್ಲ.

    ಕಾರ್ವಿುಕರ ಕೆಲಸದ ಅವಧಿ ವಿಚಾರದಲ್ಲಿ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಕೆಲಸದ ಅವಧಿ ಹೆಚ್ಚು ಮಾಡಿಕೊಳ್ಳಲು ಬೇಡಿಕೆ ಇತ್ತು, ಜತೆಗೆ, ಬಹಳ ಒತ್ತಡವಿತ್ತು. ಸಾಫ್ಟ್​ವೇರ್ ಸೇರಿ ವಿವಿಧ ಕ್ಷೇತ್ರದವರಿಂದ ಕೋರಿಕೆ ಇತ್ತು.

    | ಜೆ.ಸಿ. ಮಾಧುಸ್ವಾಮಿ ಕಾನೂನು ಸಚಿವ

    ಚಿಕ್ಕಮಗಳೂರು: ಅಧಿಕಾರಿಗಳ ವರ್ತನೆಗೆ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ

    ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ವೃದ್ಧ ದಂಪತಿ: ಕಾರಣ ಕೇಳಿದ್ರೆ ಹುಬ್ಬೇರೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts