More

    ಚಿಕ್ಕಮಗಳೂರು: ಅಧಿಕಾರಿಗಳ ವರ್ತನೆಗೆ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ

    ಚಿಕ್ಕಮಗಳೂರು: ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಒಂದೇ ಗ್ರಾಮ ಪಂಚಾಯಿತಿಯ 10 ಸದಸ್ಯರು ರಾಜೀನಾಮೆ ನೀಡಿರುವ ಘಟನೆ ಕೊಪ್ಪ ತಾಲೂಕಿನ ಗುಡ್ಡತೋಟ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಒಂದೇ ದಿನ 10 ಸದಸ್ಯರು ರಾಜೀನಾಮೆ ನೀಡಿದ್ದಾರೆ. ರಸ್ತೆ ಅಗಲೀಕರಣ, ಲೇಔಟ್ ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಮಳೆಯಿಂದ ಕುಸಿದ 17 ಮನೆಗಳ ಸ್ಥಳಾಂತರಕ್ಕೂ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳ ಈ ದುವರ್ತನೆಯಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಸದಸ್ಯರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ: ಚಾಲನೆ ನೀಡಿ ಗಂಭೀರ ವಿಚಾರಗಳನ್ನು ತೆರೆದಿಟ್ಟ ನಟ ಧನಂಜಯ್

    ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿಯಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ಕೆಲಸ ಮಾಡಿಸಲು ಅಧಿಕಾರಿಗಳು ಸಹ ಮನಸ್ಸು ಮಾಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸದಸ್ಯರು ನಿಮ್ಮ ನಿರ್ಲಕ್ಷ್ಯಕ್ಕೆ ನಮ್ಮ ಉತ್ತರ ಇದೆ ಎಂದು ತಾಲೂಕು ಪಂಚಾಯಿತಿ ಇಓಗೆ ರಾಜೀನಾಮೆ‌ ಪತ್ರವನ್ನು ನೀಡಿದ್ದಾರೆ.

    ಪಂಚಾಯಿತಿಯಲ್ಲೂ ಕಮಿಷನ್​
    ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಪಂಚಾಯತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ಎಂಬುವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಗ್ರಾಮದ ಅಭಿವೃದ್ಧಿ ಕೆಲಸಗಳಿಗಾಗಿ ಕಾಮಗಾರಿ ಅನುಮೋದನೆಗೆ ಪಂಚಾಯಿತಿ ಅಧಿಕಾರಿಗಳಿಂದ ಶೇ. 30 ಕಮಿಷನ್ ಬೇಡಿಕೆ ಇದೆ. ಆದರೆ, ಕಮಿಷನ್ ನೀಡಲು ನನ್ನ ಕೈಯಿಂದ ಸಾಧ್ಯವಾಗದೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

    ಇದನ್ನೂ ಓದಿ: ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    ಕಾಮಗಾರಿ ಬಳಿಕ‌ ಹಣದ ಬಿಲ್​​ಗಾಗಿ ಪಿಡಿಒಗೆ 10% ಇಂಜಿನೀಯರ್​ಗೆ 10% ತಾ.ಪಂ ಎಡಿ, ಎಒಗೆ 7% ಹಾಗೂ ಟೆಕ್ನಿಕಲ್​ಗೆ 3% ಸೇರಿ ಒಟ್ಟು 30% ಕಮಿಷನ್ ಬೇಡಿಕೆ ಇಡುತ್ತಿದ್ದಾರೆ. ಇಷ್ಟು ಕಮಿಷನ್​ ಕೊಡಲು ಸಾಧ್ಯವಿಲ್ಲ. ಅಲ್ಲದೆ, ಇಷ್ಟೊಂದು ಕಮಿಷನ್​ ನೀಡಿ ಉತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಠಿಣವಾಗಿದೆ. ಹೀಗಾಗಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಸಿದ್ದಪ್ಪ ರಾಜಂಗಳೆ ಅವರು ಪತ್ರದಲ್ಲಿ ಆರೋಪಿಸಿದ್ದರು. (ದಿಗ್ವಿಜಯ ನ್ಯೂಸ್​)

    ಚಿಕ್ಕೋಡಿ: ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ

    ರಾಜ್ಯ ಚುನಾವಣೆಗೆ ಭದ್ರಕೋಟೆ: ಅರೆಸೇನಾ ಪಡೆಗಳಿಗೆ ಹೆಚ್ಚಿದ ಬೇಡಿಕೆ; ಗದ್ದಲ, ಹಿಂಸಾಚಾರದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts