More

    ಹಸಿರುಮಕ್ಕಿ ಲಾಂಚ್ ಸ್ಥಗಿತ

    ಸಾಗರ: ಶರಾವತಿ ಹಿನ್ನೀರು ಬತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಸಿರುಮಕ್ಕಿ ಲಾಂಚ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ಕೊರತೆ ಮತ್ತು ವಿಪರೀತ ಬಿಸಿಲಿನ ಝಳದಿಂದ ಶರಾವತಿ ಹಿನ್ನೀರು ಬತ್ತಿ ಹೋಗಿದೆ. ನೀರಿನ ಆಳದಲ್ಲಿರುವ ಮರದ ದಿಮ್ಮಿಗಳು, ಕಲ್ಲುಬಂಡೆಗಳು ಮೇಲ್ಭಾಗಕ್ಕೆ ಬಂದಿರುವುದರಿಂದ ಲಾಂಚ್‌ಗೆ ತಾಗಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಲಾಂಚ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದೊಂದು ವಾರದಿಂದ ಹಸಿರುಮಕ್ಕಿ ಲಾಂಚ್‌ನಲ್ಲಿ ಜನರ ಜತೆಗೆ ಲಘು ವಾಹನ, ದ್ವಿಚಕ್ರ ವಾಹನವನ್ನು ಸಾಗಿಸಲಾಗುತ್ತಿತ್ತು. ಇದೀಗ ಲಾಂಚ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು ಮಳೆ ಬಂದು ನೀರಿನ ಮಟ್ಟ ಹೆಚ್ಚಳ ಆಗುವವರೆಗೂ ಹಸಿರುಮಕ್ಕಿ ಲಾಂಚ್ ಸೇವೆ ಇರುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts