More

    ಗೋಮಾಂಸ ಮಾರಾಟಗಾರರಿಗೆ ಲಾಠಿ ರುಚಿ

    ವಿಜಯವಾಣಿ ಸುದ್ದಿಜಾಲ ಸವಣೂರ

    ಕರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೊಷಣೆ ಮಾಡಿದ್ದರೂ ಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಕಟುಕರಿಗೆ ಬುಧವಾರ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಲಾಠಿ ರುಚಿ ತೋರಿಸಿದರು.

    ಪಟ್ಟಣದ ಶುಕ್ರವಾರ ಪೇಟೆಯ ಕಟುಕರ ಓಣಿಯ ಪ್ರತಿ ಮನೆಯಲ್ಲಿ ನಿತ್ಯ ಬೆಳಗ್ಗೆ 4ರಿಂದ 7ರ ವರೆಗೆ ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು. ಸಂಪೂರ್ಣವಾಗಿ ಬಂದ್ ಮಾಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಆದರೆ, 9 ಕಟುಕರು ತಮ್ಮ ಮನೆಯಲ್ಲಿ ಅಕ್ರಮವಾಗಿ ಗೋಮಾಂಸ ವ್ಯಾಪಾರ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಹೆಗ್ಗನ್ನವರ ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿ, ಕಟುಕರಿಗೆ ಲಾಠಿ ಬೀಸಿದರು. ಇಂದಿನಿಂದ ಗೋಹತ್ಯೆ ಹಾಗೂ ಮಾಂಸ ಮಾರಾಟ ಬಂದ್ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

    ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಗೋಮಾಂಸ ಹಾಗೂ ಚರ್ಮ ಕಂಡು ಬಂದರೂ ಅವವುಗಳನ್ನು ವಶಪಡಿಸಿಕೊಳ್ಳದಿರುವುದು ಆಶ್ಚರ್ಯ ಮೂಡಿಸಿತು.

    ಸಿಪಿಐ ಶಶಿಧರ ಆರ್​ಐ ಡಿ.ಎಂ. ಪಾಟೀಲ, ಕಂದಾಯ ಇಲಾಖೆಯ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts