More

    ಕಲೆ, ಕಲಾವಿದರ ಏಳಿಗೆಗೆ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗ

    ಉಡುಪಿ: ಕಲೆ, ಕಲಾವಿದರ ಏಳಿಗೆಗೆ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗ ಸಂಕಷ್ಟದಲ್ಲಿರುವವರಿಗೆ ಕಾಮಧೇನು, ಕಲ್ಪವೃಕ್ಷ$ವಾಗಿದೆ. ವಿದ್ಯಾಪೋಷಕ್​ ಲಾನುಭವಿ ವಿದ್ಯಾರ್ಥಿಗಳು ದೈಹಿಕ, ಮಾನಸಿಕ, ಆಧ್ಯಾತ್ಮಿಕವಾಗಿ ಬೆಳೆಯುವುದರೊಂದಿಗೆ ಸಂಸ್ಥೆಯ ಋಣ ಸಂದಾಯಕ್ಕೆ ಮುಂದಾಗಬೇಕು ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್​ ಹೇಳಿದರು.

    ಬುಧವಾರ ಇನ್ಫೋಸಿಸ್​ ಫೌಂಡೇಶನ್​ ಯಕ್ಷಗಾನ ಡೆವಲಪ್​ಮೆಂಟ್​, ಟೆನಿಂಗ್​ ಮತ್ತು ರಿಸರ್ಚ್​ ಸೆಂಟರ್​ನಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾರ್ಥಿಗಳ ಐದು ದಿನಗಳ ಸನಿವಾಸ ಶಿಬಿರ ಉದ್ಘಾಟಿಸಿ, ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಕುಲಾಧಿಪತಿ ಡಾ. ನಾರಾಯಣ ಸಭಾಹಿತ್​ ಮಾತನಾಡಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮಾಹೆ ಸಂಪೂರ್ಣ ಉಚಿತವಾಗಿ ಅವಕಾಶ ಕಲ್ಪಿಸುತ್ತದೆ. ಕಲಾರಂಗದ ಕಾರ್ಯ ಚಟುವಟಿಕೆಗಳಿಗೆ ಮಾಹೆ ಸದಾ ಬೆಂಬಲ ನೀಡುತ್ತದೆ ಎಂದು ನುಡಿದರು. ಅಭ್ಯಾಗತರಾಗಿ ಪ್ರೊ. ಉಪೇಂದ್ರ ಸೋಮಯಾಜಿ, ಎಚ್​. ನರಸಿಂಹ ಮೂರ್ತಿ, ಯು. ವಿಶ್ವನಾಥ ಶೆಣೈ, ಮರ್ಣೆ ಉಮೇಶ್​ ಭಟ್​, ಯು. ಎಸ್​. ರಾಜಗೋಪಾಲ ಆಚಾರ್ಯ ಭಾಗವಹಿಸಿದ್ದರು. ಮೈಲೈಫ್​ ಹುಬ್ಬಳ್ಳಿ ಸ್ಥಾಪಕ ಪ್ರವಿಣ್​ ಗುಡಿ ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಎಸ್​. ವಿ. ಭಟ್​, ಪಿ. ಕಿಶನ್​ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್​ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್​ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ನಿರೂಪಿಸಿ, ಅಶೋಕ್​ ಎಂ. ವಂದಿಸಿದರು. ಮೇ 12ರ ತನಕ ನಡೆಯುವ ಈ ಐದು ದಿನದ ಶಿಬಿರದಲ್ಲಿ 220 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts